dtvkannada

ಕಲಬುರಗಿ: ನಾನು ವಿಧಾನಸೌಧದಲ್ಲಿ ಹಿಜಾಬ್ ಧರಿಸಿಯೇ ಕೂರುತ್ತೇನೆ. ಧೈರ್ಯವಿದ್ದರೆ ಯಾರಾದರೂ ತಡೆಯಲಿ. ರಾಜ್ಯದಲ್ಲಿ ಅಭಿವೃದ್ಧಿಯಾಗುತ್ತಿಲ್ಲ. ಅದಕ್ಕಾಗಿ ಈ ರೀತಿಯ ವಿಚಾರಗಳನ್ನು ಮುನ್ನಲೆಗೆ ತರಲಾಗುತ್ತಿದೆ. ನಾನು ಸಾಧ್ಯವಾದರೆ ಉಡುಪಿಗೆ ಹೋಗಿ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ನೀಡುತ್ತೇನೆ ಎಂದು ಕಲಬುರಗಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಖನೀಜ್ ಪಾತೀಮಾ ಹಿಜಾಬ್ ಬೆಂಬಲಸಿ ಹೇಳಿಕೆ ನೀಡಿದ್ದಾರೆ.

ಮುಸ್ಲಿಂ ಮಹಿಳೆಯರನ್ನು ಅವಮಾನಿಸುವ ಘಟನೆಗಳು ನಡೆಯುತ್ತಿದೆ. ಕಳೆದ ವರ್ಷ ಜುಲೈ ತಿಂಗಳಲ್ಲಿ ಸುಲ್ಲಿ ಡೀಲ್ಸ್ ಆಪ್ ಮೂಲಕ ಮುಸ್ಲಿಂ ಮಹಿಳೆಯರ ಮಾರಾಟ ನಡೆಸುವ ದುರ್ಘಟನೆ ನಡೆದಿತ್ತು. ಇದರ ಮೂಲಕ 108 ಮುಸ್ಲಿಂ ಮಹಿಳೆಯರ ಮಾರಾಟ ಮಾಡಲಾಗಿದೆ. ತನಿಖೆಯಲ್ಲಿ ಸತ್ಯಾಂಶ ಬಯಲಾಗಿದೆ. 18 ರಿಂದ 25 ವರ್ಷದ ಯುವಕರು ಸಿಕ್ಕಿಬಿದ್ದಿದ್ದಾರೆ. ಈ ಗುಂಪಿನ ಹಿಂದೆ ಷಡ್ಯಂತ್ರ ಅಡಗಿದೆ. ಒಂದರ ಹಿಂದೆ ಒಂದು ಘಟನೆಗಳು ಮರುಕಳಿಸುತ್ತಿದೆ. ಇದೀಗ ಶಿಕ್ಷಣ ವಲಯದಲ್ಲಿ ಹಿಜಾಬ್ ಹೆಸರಿನಲ್ಲಿ ಮುಸ್ಲಿಂ ಮಹಿಳೆಯರನ್ನು ಅವಮಾನಿಸಲಾಗುತ್ತಿದೆ. ಉಡುಪಿಯಿಂದ ಶುರುವಾದ ವಿವಾದ ರಾಜ್ಯದ 6 ಕಾಲೇಜುಗಳಲ್ಲಿ ಹಬ್ಬಿದೆ. ಕೇಸರಿ ಶಾಲು ತೊಟ್ಟ ವಿದ್ಯಾರ್ಥಿಗಳು ಜೈ ಶ್ರೀರಾಮ ಘೋಷಣೆ ಕೂಗುತ್ತಿದ್ದಾರೆ. ಹಿಜಾಬ್ ಧಾರಣೆ ಮುಸ್ಲಿಂ ಧರ್ಮದ ಆಚರಣೆಯಾಗಿದೆ. ಶಾಸಕ ರಘುಪತಿ ಭಟ್, ಶಿಕ್ಷಣ ಸಚಿವರ ಹೇಳಿಕೆ ಆಶ್ಚರ್ಯಕರವಾಗಿದೆ ಎಂದು ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಸಮಿತಿ ಸದಸ್ಯೆ ಕೆ. ಪಿ. ಫಾತಿಮ್ ಶೆರಿನ್ ಹೇಳಿದ್ದಾರೆ.

ಶಿಕ್ಷಣ ಸಂಸ್ಥೆಯಲ್ಲಿ ಸರಸ್ವತಿ ಪೂಜೆ ಮಾಡಲು ಅನುಮತಿ ಇದೆ. ಗಣಪತಿ ಹಬ್ಬ ಮಾಡಲು ಅವಕಾಶ ಇದೆ ಎಂದು ಉಡುಪಿ ಶಾಸಕರು ಹೇಳುತ್ತಾರೆ. ಹಾಗಿದ್ದರೆ ಹಿಜಾಬ್ ಹಾಕಲು ಅವಕಾಶಯಾಕಿಲ್ಲ. ಹಿಜಾಬ್ ಕೂಡ ಸಾಂವಿಧಾನಿಕ ಹಕ್ಕು. ಕಾರ್ಯಕ್ರಮಗಳಲ್ಲಿ ಅಥವಾ ಸೋಶಿಯಲ್ ಮೀಡಿಯಾದಲ್ಲಿ ಹಿಜಾಬ್ ಧರಿಸುವುದು ಬಿಡುವುದು ಅವರವರ ಚಾಯ್ಸ್. ಇದನ್ನು ಶಿಕ್ಷಣ ವಲಯಕ್ಕೆ ಹೋಲಿಸಬಾರದು ಎಂದು ಹಿಜಾಬ್ ವಿವಾದದ ಬೆನ್ನಲ್ಲೇ ಸಿಎಫ್ಐ ರಾಷ್ಟ್ರೀಯ ಸಮಿತಿ ಸದಸ್ಯೆ ಫಾತಿಮಾ ಶೆರಿನ್ ಹೇಳಿಕೆ ನೀಡಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!