ಮಂಚಿಲ: ಭೂಮಿಯಲ್ಲಿ ಇರುವಷ್ಟು ಕಾಲ ಸಹಾಯ ಸಹಕಾರ ಮಾಡಿ ಬದುಕಬೇಕೆ ಹೊರತು ಗಾಳಿ ಮಾತಿಗೆ ದುಡುಕಿ ಜೀವನ ಕೊನೆಗಾನಿಸದಿರಿ ಎಂದು ಮಸ್ಜಿದ್ ಜಾಮಿಅ ಅಲ್ ಮುನವ್ವರ ಮಂಚಿಲ ಖತೀಬ್ ಕೆ.ಎಚ್.ಅಶ್ರಫ್ ಸಅದಿ ಅಭಿಪ್ರಾಯ ಪಟ್ಟರು.
ಅವರು ಇಂದು ಮಸ್ಜಿದ್ ಜಾಮಿಅ ಅಲ್ ಮುನವ್ವರ ಮತ್ತು ಎಸ್,ವೈ,ಎಸ್, ಮಂಚಿಲ ಘಟಕ,ಹಾಗೂ ಬ್ಲಡ್ ಹೆಲ್ಪ್ ಕೇರ್( ರಿ) ಕರ್ನಾಟಕ ಆಯೋಜಿಸಿದ ಕೆ.ಎಮ್.ಸಿ.ಆಸ್ಪತ್ರೆ ಅತ್ತಾವರ ಇವರ ಸಹಕಾರದಲ್ಲಿ ಸಾರ್ವಜನಿಕ ಬ್ರಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ವೇದಿಕೆಯಲ್ಲಿ ಉಳ್ಳಾಲ ನಗರಸಭೆಯ ಉಪಾಧ್ಯಕ್ಷ ರಾದ ಅಯ್ಯೂಬ್ ಮಂಚಿಲ,
ಮಸ್ಜಿದ್ ಜಾಮಿಅ ಅಲ್ ಮುನವ್ವರ ಅದ್ಯಕ್ಷರಾದ ಅಶ್ರಫ್ ,ಉಪಾಧ್ಯಕ್ಷ ರಾದ ಅಬ್ದುಲ್ ರಝಾಕ್ ಹಾಜಿ,ಕೋಶಾಧಿಕಾರಿ ಇಬ್ರಾಹಿಂ ಸೈಯದ್, ಮನ್ಸೂರ್, ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ಗೌರವ ಕಾರ್ಯ ನಿರ್ವಾಹಕರಾದ ಫರ್ವಿಝ್ ಉಪ್ಪಳ,
ಇರ್ಫಾನ್ ಫಾಳ್ ಲಿ, ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ಅದ್ಯಕ್ಷರಾದ ನಝೀರ್ ಹುಸೇನ್ ವಹಿಸಿದರು. ಸಂಸ್ಥೆಯ ಎಡ್ಮಿನ್ ಗಳಾದ ಸತ್ತಾರ್ ಪುತ್ತೂರು, ಮುಸ್ತಫಾ ಕೆ.ಸಿ.ರೋಡ್,ಖಾದರ್ ಮಂಚೂರು,ಅಲ್ಮಾಝ್ ಉಳ್ಳಾಲ,ಮಸ್ಜಿದ್ ಜಾಮಿಅ ಅಲ್ ಮುನವ್ವರ ಇದರ ಪ್ರಧಾನ ಕಾರ್ಯದರ್ಶಿ ಎಸ್.ಯಂ.ಶರೀಫ್ ಸ್ವಾಗತಿಸಿದರು.
ಶಿಕ್ಷಕರಾದ ಖಬೀರ್ ಫಾಳ್ ಲಿ ದುವಾ ನೇರವೇರಿಸಿದರು. ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.