ಮಂಗಳೂರು: ವಿವಾಹಿತೆ ಮಹಿಳೆಯೊಬ್ಬರು ಗಂಡನ ಮನೆಯಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಘಟನೆ ನಗರದ ಫಳ್ನೀರಿನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರ ವಿರುದ್ದ ಪ್ರಕರಣ ದಾಖಲಾಗಿದೆ.
ಆಯಿಶಾ ಅಫೀಫಾ ನಿಗೂಢವಾಗಿ ಸಾವಿಗೀಡಾದವಳು. ಘಟನೆ ಸಂಬಂಧ ಆಯಿಶಾ ಗಂಡ ಶಹ್‌ಬಾನ್ ಮಿಸ್ಬಾ ಮತ್ತು ಆತನ ತಾಯಿ ರಝಿಯಾ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆ ವಿವರ
ನಗರದ ಬಂದರ್‌ನ ಎಂ. ಹಸನಬ್ಬ ಪುತ್ರಿ ಆಯಿಶಾ ಅಫೀಫಾಳನ್ನು 2019ರಲ್ಲಿ ಶಹ್‌ಬಾನ್ ಮಿಸ್ಬಾಗೆ ಮದುವೆ ಮಾಡಿಕೊಡಲಾಗಿತ್ತು. ಅವರು ಫಳ್ನೀರಿನ ಫ್ಲಾಟ್ ವೊಂದರಲ್ಲಿ ವಾಸವಾಗಿದ್ದರು. ಈ ದಂಪತಿಗೆ ಮಕ್ಕಳಿರಲಿಲ್ಲ. ಜ.30ರಂದು ಮಧ್ಯಾಹ್ನ ಆಯಿಷಾ ತಂದೆ ತಾಯಿಗೆ ಕರೆ ಮಾಡಿ ಮಗಳಿಗೆ ನಿಮ್ಮ ಮಗಳಿಗೆ ಹುಷಾರಿಲ್ಲ, ಮನಗೆ ಬನ್ನಿ ಅಂದಿದ್ದರು.
ಅದರಂತೆ ಕುಟುಂಬಸ್ಥರು ಅಲ್ಲಿಗೆ ತೆರಳಿದಾಗ ಮಗಳು ಸೋಫಾದಲ್ಲಿ ಮಲಗಿದ್ದು, ಮಾತನಾಡುತ್ತಿರಲಿಲ್ಲ. ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಪರೀಕ್ಷಿಸಿದ ವೈದ್ಯರು ಹಫೀಫಾ ಮೃತಪಟ್ಟಿರುವುದಾಗಿ ತಿಳಿಸಿದರು.
ನಂತರ ಮಗಳ ಅಂತ್ಯ ಸಂಸ್ಕಾರ ನಡೆಸಲಾಗಿದೆ. ಮಗಳಿಗೆ ಅತ್ತೆ ಮತ್ತು ಅಳಿಯ ಸೇರಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದರು. ಅವರಿಬ್ಬರು ಸೇರಿ ಮಗಳನ್ನು ಕೊಲೆ ಮಾಡಿ ನಂತರ ಆತ್ಮಹತ್ಯೆಗೈದಿದ್ದಾಳೆ ಎಂದು ಸುಳ್ಳು ಹೇಳಿದ್ದಾರೆ.
ಹಾಗಾಗಿ ಇಬ್ಬರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಯೇಷಾ ತಂದೆ ದೂರಿನಲ್ಲಿ ಅಗ್ರಹಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.