ಪುತ್ತೂರು: ಮುಹಿಯದ್ದೀನ್ ಜುಮಾ ಮಸೀದಿ ಪರ್ಲಡ್ಕ ಹಾಗೂ SKSSF ಪರ್ಲಡ್ಕ ಶಾಖೆ ಇದರ ಆಶ್ರಯದಲ್ಲಿ ವಿ-ಕೇರ್ ಲ್ಯಾಬೊರೇಟರಿ ಹೆಲ್ತ್’ಕೇರ್ ಪುತ್ತೂರು ಇದರ ಸಹಭಾಗಿತ್ವದಲ್ಲಿ ಉಚಿತ ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆ ಶಿಬಿರ ಕಾರ್ಯಕ್ರಮವು ಶಂಸುಲ್ ಉಲಮಾ ಮೆಮೋರಿಯಲ್ ಕಾಲೇಜು ಪರ್ಲಡ್ಕ ವಠಾರದಲ್ಲಿ ನಡೆಯಿತು.
ಜಮಾಅತ್ ಕಮೀಟಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಹಾಜಿ ಕಾರ್ಯಕ್ರಮಕ್ಕೆ ಆಗಮಿಸಿ ಶುಭಹಾರೈಸಿದರು
ಕಾರ್ಯಕ್ರಮವನ್ನು ಸದರ್ ಉಸ್ತಾದರಾದ ಜಮಾಲುದ್ದೀನ್ ದಾರಿಮಿಯವರು ದುಃಆ ಮಾಡುವ ಮೂಲಕ ಚಾಲನೆ ನೀಡಿದರು. ಪರ್ಲಡ್ಕ ಖತೀಬ್ ಉಸ್ತಾದ್ ಅಬ್ದುಲ್ ರಶೀದ್ ರಹ್’ಮಾನಿ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಪರ್ಲಡ್ಕ ಜಮಾಅತ್ ಕಮೀಟಿ ಕಾರ್ಯದರ್ಶಿಯಾದ ಫಾರೂಕ್, ಜಮಾಅತ್ ಕಮಿಟಿ ಸದಸ್ಯರಾದ ಬಶೀರ್ ಜಿ.ಕೆ, SKSSF ಪರ್ಲಡ್ಕ ಶಾಖೆ ಅಧ್ಯಕ್ಷರಾದ ಹಾಫಿಲ್ ಪರ್ಲಡ್ಕ, SKSSF ಪರ್ಲಡ್ಕ ಶಾಖೆ ಕಾರ್ಯದರ್ಶಿಯಾದ ತ್ವಾಹ, SKSSF ಪರ್ಲಡ್ಕ ಉಪಾಧ್ಯಕ್ಷರಾದ ನೌಫಲ್, SKSSF ವರ್ಕಿಂಗ್ ಕಾರ್ಯದರ್ಶಿ ಅರ್ಝಾನ್ ಪರ್ಲಡ್ಕ, SKSSF ಟ್ರೆಂಡ್ ಕಾರ್ಯದರ್ಶಿ ಸಿನಾನ್, SKSSF ಕೋಶಾಧಿಕಾರಿ ಸುಹೈಲ್, SKSSF ಸಹಚಾರಿ ಕಾರ್ಯದರ್ಶಿ ಅಲಿ ಪರ್ಲಡ್ಕ, SKSSF ಪರ್ಲಡ್ಕ ಶಾಖೆ ಸದಸ್ಯರಾದ ಅಬೂಬಕರ್, ತುಫೈಲ್, ಹಮೀದ್, ಝಾಹಿದ್, ವೀ- ಕೇರ್ ಲ್ಯಾಬ್ ಸಿಬ್ಬಂದಿಗಳಾದ ಸವಾದ್, ಇರ್ಷಾದ್ ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.