dtvkannada

ಉಪ್ಪಿನಂಗಡಿ: ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಹಿಜಾಬ್ ವಿರೋದಿ ನೀತಿಯ ವಿರುಧ್ದ ಮಹಿಳಾ ಹಕ್ಕುಗಳ ಹಿತರಕ್ಷಣಾ ವೇದಿಕೆ ಉಪ್ಪಿನಂಗಡಿ ಇದರ ವತಿಯಿಂದ ಉಪ್ಪಿನಂಗಡಿ ಸರ್ಕಲ್ ಎದುರುಗಡೆ ಪ್ರತಿಭಟನೆ ನಡೆಯಿತು.

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಸೈದಾ ಯೂಸುಫು ಹಿಜಾಬ್ ಎಂಬುದು ಮಹಿಳೆಯರ ರಕ್ಷಣೆಯಾಗಿದ್ದು.ಶತಮಾನಗಳಿಂದಲೂ ಪಾಲಿಸುತ್ತಾ ಬಂದಿದ್ದೇವೆ.ಸಂವಿದಾನವೂ ಸಹ ಅವರವರ ದರ್ಮದ ಸಂಸ್ಕ್ರತಿಯಂತೆ ಬದುಕಲು ಅವಕಾಶ ನೀಡುತ್ತಿರುವಾಗ ಕೆಲವು ಕೋಮುವಾದಿ ಶಕ್ತಿಗಳು ವಿದ್ಯಾರ್ಥಿಗಳ ಮದ್ಯೆ ವಿಷ ಬೀಜ ಬಿತ್ತುವ ಮೂಲಕ ತನ್ನ ರಾಜಕೀಯ ಶಕ್ತಿಯನ್ನು ಬೆಳೆಸುತ್ತಿದೆ. ನಾವೆಲ್ಲರೂ ಹಿಜಾಬ್ ದರಿಸಿಯೇ ಶಿಕ್ಷಣ ಪಡೆದಿರುವುದು ಆದರೆ ಅವಾಗ ಇಲ್ಲದ ಸಮಸ್ಯೆ ಇವಾಗ ತಲೆತೋರಿದ್ದು ಯಾಕಾಗಿ ?ಎಂಬದನ್ನು ನಾವೂ ಅರ್ಥೈಸಬೇಕಿದೆ. ಹಿಜಾಬ್ ನಮ್ಮ ಹಕ್ಕು,ನಮ್ಮ ಹಕ್ಕಿಗಾಗಿ ನಾವೂ ಹೋರಾಟ ಮಾಡಬೇಕಾಗಿರುವುದು ಅನಿವಾರ್ಯ ಅದಕ್ಕಾಗಿ ಶಿಕ್ಷಣವೂ ಬೇಕು ಮತ್ತು ಹಿಜಾಬ್ ಕೂಡ ಬೇಕು ನಿಮ್ಮ ರಾಜಕೀಯ ಷಡ್ಯಂತ್ರಕ್ಕೆ ನಮ್ಮ ಹಕ್ಕನ್ನು ಬಲಿಕೊಡಲಾರೆವೂ ಎಂದು ಅಕ್ರೋಶ ವ್ಯಕ್ತಪಡಿಸಿದರು. ಅನ್ಯಾಯದ ವಿರುಧ್ದ ಸಮಾನ ಮನಸ್ಕ ಶಕ್ತಿಗಳು ಒಂದಾಗಬೇಕೆಂದು ಆಗ್ರಹಿಸಿದರು.

ಹಿಜಾಬ್ ದರಿಸಿಕೊಂಡು ಬರುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ತರಗತಿಗೆ ಅವಕಾಶ ನೀಡಬೇಕೆಂದು ಮಹಿಳಾ ಹಕ್ಕುಗಳ ಹಿತರಕ್ಷಣಾ ವೇದಿಕೆ ಉಪ್ಪಿನಂಗಡಿ ಸಂಚಾಲಕಿ ಫಾಹಿನ ನೇತೃತ್ವದಲ್ಲಿ ಉಪ್ಪಿನಂಗಡಿ ನಾಡ ಕಚೇರಿಯಲ್ಲಿ ಉಪತಹಶೀಲ್ದಾರರಿಗೆ ಮನವಿ ನೀಡುವ ಮೂಲಕ ಆಗ್ರಹಿಸಲಾಯಿತು.

ಕಾರ್ಯಕ್ರಮದಲ್ಲಿ ಸಹಲ ತುಂಬೆ, ಆಶುರಾ,ಮಿಸ್ರಿಯಾ,ಸಮ್ರತ್,ಅನಿಶಾ ಸಂಶಾದ್ ಉಪಸ್ಥಿತರಿದ್ದರು. ಸಾಜಿದ ಹಬೀಬ್ ಕಾರ್ಯಕ್ರಮ ನಿರೂಪಣೆಗೈದರು.

By dtv

Leave a Reply

Your email address will not be published. Required fields are marked *

error: Content is protected !!