dtvkannada

ಬೆಳ್ತಂಗಡಿ: ಬೆಳ್ತಂಗಡಿ ಕರ್ನಾಟಕದ ಬಹುತೇಕ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಅಸಂವಿಧಾನಿಕ ಹಿಜಾಬ್ ವಿರೋಧಿ ನಡೆಯ ವಿರುದ್ಧ ಫೆ.7 ರಂದು ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ಬೆಳ್ತಂಗಡಿ ಸಮಾನ ಮನಸ್ಕ ಮಹಿಳಾ ವೇದಿಕೆಯಿಂದ ಬೃಹತ್ ಪ್ರತಿಭಟನೆ ನಡೆಯಿತು.

ಹಿಜಾಬ್ ಮುಸ್ಲಿಮರ ಧಾರ್ಮಿಕ ಹಕ್ಕಾಗಿದ್ದು ಶತಮಾನಗಳಿಂದ ನಡೆದು ಬರುತ್ತಿರುವುದು ಮಾತ್ರವಲ್ಲ ಭಾರತ ಸಂವಿಧಾನ ಇದಕ್ಕೆ ಅನುಮತಿ ನೀಡಿದೆ. ಇದನ್ನು ವಿವಾದವನ್ನಾಗಿ ಮಾಡಲು ಹೊರಟಿರುವುದು ಖಂಡನೀಯ. ವಿದ್ಯಾರ್ಥಿ, ವಿದ್ಯಾರ್ಥಿಗಳ ನಡುವೆ ಕೋಮ ವಿಷ ಬೀಜ ಬಿತ್ತುವ ಸಂಘಪರಿವಾರದ ರಾಜಕೀಯ ಷಡ್ಯಂತ್ರವಾಗಿದೆ ಎಂದು ಪ್ರತಿಭಟನೆಯಲ್ಲಿ ಸಮಾನ ಮನಸ್ಕ ಮಹಿಳಾ ವೇದಿಕೆ ಬೆಳ್ತಂಗಡಿ ಅಧ್ಯಕ್ಷೆ ಅಸ್ಮಾ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಸಭೆಯಲ್ಲಿ ಸಮಿತಿಯ ಸದಸ್ಯರುಗಳಾದ ಯಾಸ್ಮೀನ್, ಸಫ್ರೀನಾ ಮಾತನಾಡಿ ಖಂಡಿಸಿದರು.

ಈ ವೇಳೆ ಸಮಾನ ಮನಸ್ಕ ಮಹಿಳಾ ವೇದಿಕೆಯ ಸದಸ್ಯರು ಹಾಜರಿದ್ದರು. ಬಳಿಕ ಮುಸ್ಲಿಮರ ಧಾರ್ಮಿಕ ಹಕ್ಕಾದ ಹಿಜಾಬ್ ಅನ್ನು ಧರಿಸಿ ಕಾಲೇಜಿಗೆ ಬರುತ್ತಿರುವ ಈ ಸಂವಿಧಾನಾತ್ಮಕ ಹಕ್ಕನ್ನು ಉಳಿಸಬೇಕು ಹಾಗೂ ತಡೆಯೊಡ್ಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಹಶಿಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಿದರು.

By dtv

Leave a Reply

Your email address will not be published. Required fields are marked *

error: Content is protected !!