dtvkannada

ಪುತ್ತೂರು: ಹಿಜಾಬ್‌ದಾರಿಣಿ ವಿಧ್ಯಾರ್ಥಿಗಳಿಗೆ ಕಾಲೇಜ್ ಪ್ರವೇಶ ನಿರಾಕರಿಸಿರುವ ಕ್ರಮವನ್ನು ಖಂಡಿಸಿ ಹಿಜಾಬ್ ನಮ್ಮ ಹಕ್ಕು ಘೋಷಣೆಯಡಿಯಲ್ಲಿ ಪುತ್ತೂರಿನ ಅಮರ್ ಜವಾನ್ ಜ್ಯೋತಿ ಮುಂಬಾಗದಲ್ಲಿ ಮುಸ್ಲಿಂ ಮಹಿಳಾ ಒಕ್ಕೂಟ ಪುತ್ತೂರು ಇದರ ವತಿಯಿಂದ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯೆ ಮಿಸ್ರಿಯಾ ಪುತ್ತೂರು ಅವರು ಮಾತನಾಡಿ, ಸಂಘಪರಿವಾರದ ಕುತಂತ್ರದಿಂದ ಇಲ್ಲಿನ ಸಂವಿಧಾನ ನೀಡಿರುವ ಹಕ್ಕನ್ನು ಮುಸ್ಲಿಮರಿಂದ ಕಸಿಯಲಾಗುತ್ತಿದೆ. ಸಿಖ್ ನಂಬಿಕೆಯಂತೆ ಮನಮೋಹನ್ ಸಿಂಗ್ ದೇಶವನ್ನು ಆಳಬಹುದಾದರೆ, ಮುಸ್ಲಿಮರಿಗೆ ಆ ಅವಕಾಶ ಯಾಕಿಲ್ಲ ಎಂದು ಪ್ರಶ್ನಿಸಿದ ಅವರು, ಹಿಜಾಬ್ ನಮ್ಮ ಪರಂಪರೆ, ಅದು ಖಂಡಿತ ಇನ್ನು ಮುಂದೆಯೂ ಮುಂದುವರಿಯಲಿದೆ ಜೊತೆಗೆ ಭವಿಷ್ಯದಲ್ಲಿ ಹಿಜಾಬ್‌ದಾರಿಣಿಯರೇ ಭಾರತವನ್ನು ಆಳಲಿದ್ದಾರೆ ಎಂದರು.

ಮುಸ್ಲಿಂ ಒಕ್ಕೂಟ ಸಿಮಿತಿಯ ಸಾಬಿರ ಮಾತನಾಡಿ, ಹಿಜಾಬ್ ನಮ್ಮ ಹಕ್ಕು, ನಮ್ಮ ಹಕ್ಕಿಗಾಗಿ ನಾವೂ ಹೋರಾಟ ಮಾಡಬೇಕಾಗಿರುವುದು ಅನಿವಾರ್ಯ ಅದಕ್ಕಾಗಿ ಶಿಕ್ಷಣವೂ ಬೇಕು ಮತ್ತು ಹಿಜಾಬ್ ಕೂಡ ಬೇಕು ನಿಮ್ಮ ರಾಜಕೀಯ ಷಡ್ಯಂತ್ರಕ್ಕೆ ನಮ್ಮ ಹಕ್ಕನ್ನು ಬಲಿಕೊಡಲಾರೆವೂ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಮುಸ್ಲಿಂ ಒಕ್ಕೂಟ ಸಮಿತಿ ಪುತ್ತೂರು ಸಂಚಾಲಕಿ ಸಹನಾಝ್ ಪುತ್ತೂರು ಸ್ವಾಗತಿಸಿ, ವಂದಿಸಿದರು.
ಪ್ರತಿಭಟನೆಯಲ್ಲಿ ಹಲವು ಮಂದಿ ಭಾಗವಹಿಸಿ ದಿಕ್ಕಾರ ಕೂಗಿದರು.

By dtv

Leave a Reply

Your email address will not be published. Required fields are marked *

error: Content is protected !!