ಮಂಗಳೂರು: ಟಿಕ್ ಟಾಕ್ ಮೂಲಕ ಜನಮನಗೆದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆದ ಮಂಗಳೂರಿನ ಟಿಕ್’ಟಾಕ್ ಸ್ಟಾರ್ ಧನರಾಜ್ ಆಚಾರ್ ಎಂಬವರ ಅಜ್ಜಿ “ಡಾನ್ ಅಜ್ಜಿಯೆಂದೇ ಖ್ಯಾತರಾಗಿದ್ದ ಕಮಲಜ್ಜಿ(86) ಇಂದು ನಿಧನರಾಗಿದ್ದಾರೆ.
ಕಳೆದ ಕೆಲವು ತಿಂಗಳಿಂದ ಟಿಕ್‌ಟಾಕ್ ಸೇರಿ ಸಾಮಾಜಿಕ ಜಾಲತಾಣದಲ್ಲಿ ಸೌಂಡ್ ಮಾಡಿದ್ದ ಕಮಲಜ್ಜಿ ಇಂದು ಸಂಜೆ 4:30 ಕ್ಕೆ ನಿಧನರಾಗಿದ್ದಾರೆಂದು ಟಿಕ್‌ಟಾಕ್ ಸ್ಟಾರ್ ಧನಂಜಯ ಆಚಾರ್ ಫೇಸ್‌ಬುಕ್‌ನಲ್ಲಿ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಧನರಾಜ್ ಆಚಾರ್’ರವರ ವೀಡಿಯೋಗಳಲ್ಲಿ ಅಜ್ಜಿ ಹಲವು ಪಾತ್ರಗಳನ್ನು ಮಾಡುವುದರ ಮೂಲಕ ಎಲ್ಲರ ಪ್ರೀತಿಪಾತ್ರರಾಗಿದ್ದರು. ಟಿಕ್ ಟಾಕ್ ಡಾನ್ ಅಜ್ಜಿ ಎಂದೇ ಖ್ಯಾತಿ ಪಡೆದಿದ್ದರು.
ನಾಳೆ ಬೆಳಗ್ಗೆ ಸ್ವಗೃಹ ಅನಂತಾಡಿಯಲ್ಲಿ ಅಜ್ಜಿಯ ಅಂತಿಮ ದರ್ಶನ ಇಡಲಾಗಿದೆ ಎಂದು ತಿಳಿದು ಬಂದಿದೆ.