ಮಂಗಳೂರು: ಮನೆಯಿಂದ ರಾತ್ರೋ ರಾತ್ರಿ ಏಕಾಏಕಿ ಇಬ್ಬರು ಸಹೋದರಿಯರಿಬ್ಬರು ನಾಪತ್ತೆಯಾದ ಘಟನೆ ಮಂಗಳೂರು ಬಜೆಪೆಯ ಕೊಂಚಾರ್ ಎಂಬಲ್ಲಿ ನಡೆದಿದ್ದು ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಾಪತ್ತೆಯಾದ ಯುವತಿಯರು ಕೊಂಚಾರ್‌ನ ಬಾಡಿಗೆ ಮನೆಯಲ್ಲಿ ವಾಸವಿರುವ ಮಮ್ಮು. ಬಿ ಎಂಬವರ ಪುತ್ರಿಯರಾದ ಮುಬೀನ (22), ಬುಶ್ರಾ (23) ಎಂದು ತಿಳಿದು ಬಂದಿದೆ.
ಕಳೆದ ಸೋಮವಾರ ರಾತ್ರಿ ಊಟ ಮಾಡಿ ಮಲಗಿದ್ದರು. ರಾತ್ರಿ 2 ಗಂಟೆ ವೇಳೆಗೆ ಮಮ್ಮು ಅವರ ಕಿರಿಯ ಪುತ್ರಿ ಎಚ್ಚರಗೊಂಡು ನೋಡಿದಾಗ ಇಬ್ಬರು ಯುವತಿಯರು ಕಾಣೆಯಾಗಿದ್ದರು.
ಸಂಬಂಧಿಕರ ಸಹಿತ ಎಲ್ಲಾ ಕಡೆ ಹುಡುಕಾಟ ನಡೆಸಿದ್ದು, ಇದುವರೆಗೂ ಸುಳಿವು ಪತ್ತೆಯಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು ಪತ್ತೆ ಕಾರ್ಯ ಮುಂದುವರೆಸಿದ್ದಾರೆ.
ಮುಬೀನಾ ಎಂಬವರು 4 ಅಡಿ 2 ಇಂಚು ಎತ್ತರ, ಎಣ್ಣೆ ಕಪ್ಪು ಮೈ ಬಣ್ಣ, ಕಪ್ಪು ಕೂದಲು ಹೊಂದಿರುತ್ತಾರೆ, ಬಿಳಿ ಬಣ್ಣದ ಟಾಪ್ ಹಾಗೂ ನೀಲಿ ಬಣ್ಣದ ಪ್ಯಾಂಟ್ (ಚೂಡಿದಾರ) ಧರಿಸಿರುತ್ತಾರೆ. ಬ್ಯಾರಿ, ಹಿಂದಿ, ಇಂಗ್ಲೀಷ್, ತುಳು, ಕನ್ನಡ ಭಾಷೆ ಮಾತನಾಡುತ್ತಾರೆ.
ಬುಶ್ರಾ ಎಂಬವರು 4 ಅಡಿ 5 ಇಂಚು ಎತ್ತರ, ಬಿಳಿ ಮೈಬಣ್ಣ, ಕಪ್ಪು ಕೂದಲು ಹೊಂದಿರುತ್ತಾರೆ, ಕಂದು ಬಣ್ಣದ ಟಾಪ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್(ಚೂಡಿದಾರ) ಧರಿಸಿರುತ್ತಾರೆ. ಬ್ಯಾರಿ, ತುಳು, ಕನ್ನಡ ಭಾಷೆ ಮಾತನಾಡುತ್ತಾರೆ.
ಇಬ್ಬರನ್ನೂ ಎಲ್ಲಿಯಾದರೂ ಕಂಡು ಬಂದಲ್ಲಿ ಕಂಟ್ರೊಲ್ ರೂಂ ದೂ.ಸಂಖ್ಯೆ:0824-2220800 ಅಥವಾ ಬಜಪೆ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.