dtvkannada

ಕಡಬ: ಇಲ್ಲಿನ ಕೋಡಿಂಬಾಳದ ಕೊಠಾರಿ ಎಂಬಲ್ಲಿ ಹಿಂದೂ ಮಹಿಳೆಯ ಮನೆಯಲ್ಲಿ ಅನ್ಯಕೋಮಿನ ವ್ಯಕ್ತಿಯೊಬ್ಬ ಕಂಡುಬಂದಿದ್ದು, ಈಗಾಗಲೇ ಈತನನ್ನು ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತರು ಪೋಲಿಸ್ ವಶಕ್ಕೆ ನೀಡಿದ ಘಟನೆ ಫೆ. 11 ರಂದು ಬೆಳಿಗ್ಗೆ ನಡೆದಿದೆ.

ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಕೊಠಾರಿ ಎಂಬಲ್ಲಿ ವಾಸವಿರುವ ಮಹಿಳೆಯ ಮನೆಯಲ್ಲಿ ಅನ್ಯಕೊಮಿನ ವ್ಯಕ್ತಿಯೋರ್ವರು ತಂಗುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

ಮಹಿಳೆಯನ್ನು ಮತಾಂತರ ಮಾಡುವ ಉದ್ದೇಶದಿಂದ ಕಳೆದ ಸಮಯಗಳಿಂದ ಪ್ರಯತ್ನಗಳು ಈ ವ್ಯಕ್ತಿಯಿಂದ ನಡೆದಿದೆಸಂಶಯ ಬಂದಿದ್ದು, ಇದಕ್ಕೆ ಪೂರಕ ಸಾಕ್ಷಾಧಾರಗಳು ದೊರೆತಿರುವುದರಿಂದ ಮಹಿಳೆಯ ಮನೆಗೆ ಕಡಬ ಹಿಂದೂ ಸಂಘಟನೆಯ ಕಾರ್ಯಕರ್ತರು ಭೇಟಿ ಮಾಡಿ ಮನವೊಲಿಸಿದ್ದರು.

ಈ ವ್ಯಕ್ತಿಯೂ ಹಲವಾರು ಸಮಯದಿಂದ ಮಹಿಳೆಯ ಮನೆಗೆ ಬರುತ್ತಿರುವುದು ಸಂಘಟನೆಯವರ ಕೆಂಗಣ್ಣಿಗೆ ಗುರಿಯಾಗಿತ್ತು.

ಈ ಹಿನ್ನೆಲೆಯಲ್ಲಿ ಫೆ.11 ರಂದು ಮುಂಜಾನೆ ಆ ವ್ಯಕ್ತಿಯನ್ನು ಪೋಲಿಸ್ ವಶಕ್ಕೆ ನೀಡಿದ್ದು ಸದ್ಯ ಆ ವ್ಯಕ್ತಿ ಪೋಲಿಸ್ ವಶವಾಗಿದ್ದಾನೆ ಎಂದು ತಿಳಿದು ಬಂದಿದೆ.

By dtv

Leave a Reply

Your email address will not be published. Required fields are marked *

error: Content is protected !!