ಉಳ್ಳಾಲ: ಮನುಷ್ಯ ಜೀವದಲ್ಲಿರುವ ರಕ್ತ ಜಾತಿ-ಧರ್ಮಾದಾರಿತವಲ್ಲ. ಹಿಂದೂವಿನ ರಕ್ತ ಮುಸ್ಲಿಮನಿಗೂ ಮುಸ್ಲಿಮನ ರಕ್ತ ಹಿಂದೂ ವ್ಯಕ್ತಿಗೂ ನೀಡಿ ಅಪಾಯದಲ್ಲಿರುವ ರೋಗಿಯ ಜೀವ ರಕ್ಷಣೆಯಾಗುವುದನ್ನು ನಾವು ನಿತ್ಯ ಕಾಣುತ್ತಿದ್ದೇವೆ.
ಆದ್ದರಿಂದ ರಕ್ತದಾನ ಮಾಡುವುದು ಮತ್ತು ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ,ರಕ್ತದಾನ ಮಾನವೀಯತೆಯ ಪ್ರತ್ಯಕ್ಷ ದರ್ಶನ ವಾಗಿದೆ ಎಂದು ಮಾಜಿ ಮಂಡಲ ಪ್ರಧಾನರು ಹಾಗೂ ಮೊಗವೀರ ಸಮಾಜದ ಮುಖಂಡ ಬಾಬು ಬಂಗೇರ ಹೇಳಿದರು.

ಅವರು ಖುತುಬುಝ್ಝಮಾನ್ ಹಝ್ರತ್ ಸಯ್ಯದ್ ಶರೀಫುಲ್ ಮದನಿ (ಖ.ಸಿ) ದರ್ಗಾ ಉಳ್ಳಾಲ ಇದರ 21ನೇ ಪಂಚ ವಾರ್ಷಿಕ ಉರೂಸ್ ಮುಬಾರಕ್ ಪ್ರಯುಕ್ತ ದರ್ಗಾ ಸಮಿತಿ ಮತ್ತು ಉರೂಸ್ ಸಮಿತಿ ಉಳ್ಳಾಲ, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಇದರ ಸಂಯುಕ್ತ ಆಶ್ರಯದಲ್ಲಿ ದೇರಳಕಟ್ಟೆ ಯೇನಪೋಯ ಆಸ್ಪತ್ರೆ ರಕ್ತ ನಿಧಿ ಮತ್ತು ದೇರಳೆಕಟ್ಟೆ ಕೆ.ಎಸ್ ಹೆಗ್ಡೆರಕ್ತ ನಿಧಿ ಸಹಬಾಗಿತ್ವದಲ್ಲಿ ನಡೆದ ಐತಿಹಾಸಿಕ ರಕ್ತದಾನ ಶಿಬಿರವನ್ನುದ್ದೇಶಿಸಿ ಮಾತನಾಡಿದರು.
ಉಳ್ಳಾಲದ ಸೈಯ್ಯದ್ ಮದನಿ ಅರಬಿಕ್ ಕಾಲೇಜಿನ ಪ್ರಿನ್ಸಿಪಾಲ್ ಶೈಖುನಾ ಉಸ್ಮಾನ್ ಫೈಝಿಯವ ದುಆದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಳ್ಳಾಲ ಸಯ್ಯದ್ ಮದನಿ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ “ನಾವು ರಕ್ತದಾನ ಮಾಡುವ ಮೂಲಕ ಸಾವಿನ ದವಡೆಯಿಂದ ಮನುಷ್ಯ ಜೀವವನ್ನು ಉಳಿಸಬಹುದು, ಈ ನಿಟ್ಟಿನಲ್ಲಿ ರಕ್ತದಾನ ಶಿಬಿರದ ಮೂಲಕ ಜನರ ಜೀವ ಉಳಿಸುವಂತಹ ಕಾರ್ಯ ಶ್ಲಾಘನೀಯ, ಮುಂದೆಯೂ ಇನ್ನಷ್ಟು ಶಿಬಿರವನ್ನು ಏರ್ಪಡಿಸಲು ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ,
ಸಂಸ್ಥೆ ಗೆ ಸರ್ವ ಶಕ್ತನಾದ ಅಲ್ಲಾಹ್ ಅನುಗ್ರಹಿಸಲಿ ಎಂದರು.

ಉಳ್ಳಾಲದ ಮುಸ್ಲಿಮೇತರರು ಉಳ್ಳಾಲ ದರ್ಗಾ ದ ಉರೂಸಿನ ಯಶಸ್ವಿಯಲ್ಲಿ ಅಗತ್ಯ ಸಹಕಾರವನ್ನು ನೀಡುತ್ತಾ ಬಂದವರು.ಉಳ್ಳಾಲ ದರ್ಗಾ ಆಡಳಿತ ಹಿಂದೂ-ಕ್ರೈಸ್ತ ಬಾಂಧವರ ಸಹಕಾರಕ್ಕೆ ಆಬಾರಿಯಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ
ಶಂಶುದ್ದೀನ್ ಬಳ್ಕುಂಜೆ ರಕ್ತದಾನದ ಮಹತ್ವದ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಉಳ್ಳಾಲದ ವಾಜಪೇಯಿ ಎಂದೇ ಸ್ಥಳೀಯವಾಗಿ ಜನಪ್ರಿಯರಾದ ಮಾಜೀ ಮಂಡಲ ಪಂಚಾಯತ್ ಸದಸ್ಯ ರವೀಂದ್ರ ರಾಜ್ ಮಾತನಾಡಿ ಉಳ್ಳಾಲ ದರ್ಗಾ ಮತ್ತು ಹಿಂದೂ ಸಮಾಜದ ನಡುವಿನ ಸಂಬಂಧವನ್ನು ವಿವರಿಸಿ ಮಾತನಾಡಿದರು.
ಎಸ್.ಡಿ.ಪಿ.ಐ ಮುಖಂಡ ನಿಝಾಂ ಕಾಸಿಂ ಸಮಯೋಚಿತ ವಾಗಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಉಳ್ಳಾಲ ದರ್ಗಾ ಮಾದ್ಯಮ ಉಸ್ತುವಾರಿ ಫಾರೂಕ್ ಉಳ್ಳಾಲ್ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು.ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಇದರ ಗೌರವ ಸಲಹೆಗಾರರಾದ ಸುಲೈಮಾನ್ ಶೇಖ್ ಬೆಳುವಾಯಿ ಅಧ್ಯಕ್ಷೀಯ ಭಾಷಣ ಗೈದರು.
ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಅಧ್ಯಕ್ಷ ನಝೀರ್ ಹುಸೈನ್ ತಮ್ಮ ಸಂಸ್ಥೆಯ ಸೇವಾ ಚಟುವಟಿಕೆಯ ಸ್ಥೂಲ ಪರಿಚಯವನ್ನು ಸಭೆಯ ಮುಂದಿಟ್ಟರು.
ಉಳ್ಳಾಲ ನಗರ ಸಭೆಯ ಕೌನ್ಸಿಲರ್ ಅಬ್ದುಲ್ ಜಬ್ಬಾರ್,
ಮಂಡಲ ಪಂಚಾಯತ್ ಮಾಜಿ ಸದಸ್ಯ ಜಮಾಲ್ ಬಾರ್ಲಿ, ಸಯ್ಯದ್ ಮದನಿ ಅರಬಿಕ್ ಟ್ರಸ್ಟ್ ಉಪಾಧ್ಯಕ್ಷ ಅಬೂಬಕರ್, ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಎ.ಕೆ.ಮೊಯಿದಿನ್, ಅರಬಿಕ್ ಟ್ರಸ್ಟ್ ಕಾರ್ಯದರ್ಶಿ ಆಶೀಫ್ ಅಬ್ದುಲ್ಲ, ಉಳ್ಳಾಲ ನಗರ ಸಭಾ ಸದಸ್ಯ ಅಬ್ದುಲ್ ಜಬ್ಬಾರ್, ಯೇನಪೋಯ ಆಸ್ಪತ್ರೆಯ ಅರ್ಫಾಝ್ ನವಾಝ್, ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಮರಿಯ, ಉಳ್ಳಾಲ ದರ್ಗಾ ಸದಸ್ಯ ಅಲಿಮೋನು, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಇದರ ಜೆರ್ಸಿ ಅನಾವರಣವನ್ನು ಉಳ್ಳಾಲ ಸಯ್ಯದ್ ಮದನಿ ದರ್ಗಾದ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ನೆರವೇರಿಸಿದರು.
ಅಬ್ದುಲ್ ಹಮೀದ್ ಗೋಳ್ತಮಜಲ್ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಲ್ಲಿಸಿದರು.