ಮಂಗಳೂರು: ಹಲವು ದಿನಗಳ ಹಿಂದೆ ನಗರ ಹೊರವಲಯದ ಉಳ್ಳಾಲದಲ್ಲಿ ಹಿಂದೂಗಳ ದೈವ ದೇವರನ್ನು ನಿಂದಿಸುವವರಿಗೆ ಜಾತ್ರೋತ್ಸವ ಸಂದರ್ಭ ವ್ಯಾಪಾರಕ್ಕೆ ಅವಕಾಶವಿಲ್ಲ ಅನ್ನುವ ಬ್ಯಾನರ್ ಸುದ್ದಿ ಮಾಡಿತ್ತು.
ಇದೀಗ ಅದಕ್ಕೆ ಕೌಂಟರ್ ಎಂಬಂತೆ ಉಳ್ಳಾಲ ದರ್ಗಾದಲ್ಲಿ ನಡೆಯುತ್ತಿರುವ ಉರೂಸ್ ಕಾರ್ಯಕ್ರಮದಲ್ಲಿ ಎಲ್ಲ ಧರ್ಮೀಯ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಟ್ಟ ದರ್ಗಾ ಸಮಿತಿಗೆ ಅಭಿನಂದನೆ ಸಲ್ಲಿಸಿ ಎಸ್‌ಡಿಪಿಐಗೆ ಬ್ಯಾನರ್ ಹಾಕಿದೆ.
ಕೆಲದಿನಗಳ ಹಿಂದೆ ಹಿಂದೂಗಳ ದೈವ ದೇವರನ್ನು ನಿಂದಿಸುವವರಿಗೆ ಜಾತ್ರೋತ್ಸವ ಸಂದರ್ಭ ವ್ಯಾಪಾರಕ್ಕೆ ಅವಕಾಶವಿಲ್ಲ ಅನ್ನುವ ಬ್ಯಾನರನ್ನು ಉಳ್ಳಾಲಬೈಲ್ ಜಾತ್ರೋತ್ಸವದ ಸಂದರ್ಭ ಬಜರಂಗದಳ ಹಾಗೂ ವಿಹಿಂಪ ಹಾಕಿತ್ತು. ಇದಕ್ಕೆ ಕೌಂಟರ್ ಎಂಬಂತೆ ಎಸ್‌ಡಿಪಿಐನಿಂದ ಉಳ್ಳಾಲ ದರ್ಗಾ ಪಂಚ ವಾರ್ಷಿಕ ಉರೂಸಿನಲ್ಲಿ ಅಭಿನಂದನಾ ಬ್ಯಾನರ್ ಅನ್ನು ಎಸ್‌ಡಿಪಿಐ ಹಾಕಿದೆ.
ಈ ಬಾರಿಯ ದರ್ಗಾ ಉತ್ಸವದಲ್ಲಿ ಜಾತಿ-ಮತ ಬೇಧ ನೊಡದೇ ಎಲ್ಲರಿಗೂ ವ್ಯಾಪಾರಕ್ಕೆ ಅವಕಾಶ ನೀಡಲಾಗುವುದು ಎಂಬ ಮಾತನ್ನು ದರ್ಗಾ ಕಮಿಟಿಯು ಈ ಹಿಂದೆಯೇ ಹೇಳಿತ್ತು. ಈ ಮಾತು ಎಲ್ಲರ ಮಾತಿಗೆ ಪ್ರಶಂಸನೆಗೆ ಪಾತ್ರವಾಗಿದೆ.