ಮಂಗಳೂರು: ಈಗಾಗಲೇ ವಿವಾದಕ್ಕೆ ಎಡೆ ಮಾಡಿರುವ ರಾಷ್ಟ್ರೀಯ ಹೆದ್ದಾರಿ 66 ಎನ್ಐಟಿಕೆ ಅಕ್ರಮ ಟೋಲ್‌ಗೇಟ್ ಸುಲಿಗೆಯ ವಿರುದ್ಧ ಧ್ವನಿ ಎತ್ತಿರುವ ಸಮಾಜ ಸೇವಕ ಆಪದ್ಬಾಂಧವ ಆಸಿಫ್ ಅವರ ನೇತೃತ್ವದಲ್ಲಿ ನಡೆಯುತ್ತಿರುವಂತಹ ಆಹೋ ರಾತ್ರಿ ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ನಿನ್ನೆ ರಾತ್ರಿ ಬಂದಂತಹ ಪಾನಮತ್ತ ಮಂಗಳಮುಖಿಯರಿಂದ ಹಲ್ಲೆ ನಡೆಸಲು ಯತ್ನಿಸಿದ್ದಾರೆ.
ನಿನ್ನೆ ಇವರ ಪ್ರತಿಭಟನೆ ಒಂಭತ್ತನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿಭಟನಕಾರರು ಪ್ರತಿಭಟನೆ ಮುಗಿಸಿ ವಿಶ್ರಮಿಸುವರೆಗೆ ಕಾದು ಕುಳಿತಂತಹ ಪಾನಮತ್ತ ಮಂಗಳ ಮುಖಿಯರು ಹಲ್ಲೆಗೆ ಯತ್ನಿಸಿದ್ದಾರೆ.
ತದನಂತರ ಗುಪ್ತಾಂಗ ತೋರಿಸಿ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಟೋಲ್‌ಗೇಟ್ ತೆಗೆಯುವುದಕ್ಕೆ ನೀನು ಯಾರು..? ನೀನು ಆಂಬ್ಯುಲೆನ್ಸ್ ಡ್ರೈವರ್ ಎಂದಿದ್ದಾರೆ ಎಂದು ಟೀಕೆ ಮಾಡಿದ್ದಾರೆ.
ಸ್ಥಳದಲ್ಲಿ ಪೊಲೀಸರು ಇದ್ದರೂ ಕೂಡ ಡೋಂಟ್ ಕೇರ್ ಅನ್ನುವಂತಹ ರೀತಿಯಲ್ಲಿ ಮಂಗಳಮುಖಿಯರ ವರ್ತನೆ ಕಂಡು ಬರುತ್ತಿತ್ತು. ಈ ವೇಳೆ ಆಸಿಪ್ ಅವರು ಫೇಸ್ ಬುಕ್ ಲೈವ್ ಬಂದಿದ್ದಾರೆ.
ಲೈವ್ ನೋಡಿದ ಅಭಿಮಾನಿಗಳು, ಸ್ಥಳೀಯರು ಪ್ರತಿಭಟನಾ ಸ್ಥಳಕ್ಕೆ ಬಂದಾಗ ಮಂಗಳಮುಖಿಯರು ಅಲ್ಲಿಂದ ಪರಾರಿಯಾಗಿದ್ದಾರೆ.
ಘಟನೆ ಕುರಿತು ಆಪದ್ಬಾಂಧವ ಆಸಿಫ್ ಪ್ರತಿಕ್ರಿಯೆ ನೀಡಿದ್ದು, ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನವನ್ನು ಮಾಡಲಾಗಿದೆ ಎಂದು ಆರೋಪಿಸಿದ್ದು ಯಾವುದೇ ಕಾರಣಕ್ಕೂ ಪ್ರತಿಭಟನೆ ನಿಲ್ಲಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಇದೀಗ ಬಂದ ವರದಿಯಂತೆ ಪ್ರಕರಣಕ್ಕೆ ಸಂಬಂಧಿಸಿ 6 ಮಂಗಳಮುಖಿಯರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ವಾಸವಿ ಗೌಡ (32), ಲಿಪಿಕಾ (19), ಹಿಮಾ (24), ಆದ್ಯ (22), ಮಾಯಾ (28), ಮೈತ್ರಿ (28) ಎಂದು ಗುರುತಿಸಲಾಗಿದೆ.