';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬೆಂಗಳೂರು: ವಿಜಯಪುರದ ಇಂಡಿ ಪಟ್ಟಣದಲ್ಲಿ ಕುಂಕುಮ ಹಾಕಿಕೊಂಡು ಕಾಲೇಜಿಗೆ ಬಂದ ವಿದ್ಯಾರ್ಥಿಗಳನ್ನು ತಡೆಯಲಾಗಿತ್ತು. ಇದು ಹಿಂದೂ ಸಂಘಟನೆಗಳನ್ನು ಕೆರಳಿಸಿದೆ ಎಂದಿದ್ದಾರೆ.
ಕುಂಕುಮ ಹಾಕಿಕೊಂಡು ಬಂದ ವಿದ್ಯಾರ್ಥಿಯನ್ನು ತಡೆದ ಶಿಕ್ಷಕನ್ನು ಸಸ್ಪೆಂಡ್ ಮಾಡಿ ಮನೆಗೆ ಕಳಿಸಿ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಹಣೆಗೆ ಕುಂಕುಮ, ವಿಭೂತಿ ಗಂಧ ಹಾಕಿದವರನ್ನು ತಡೆಯುತ್ತಿದ್ದಾರೆ. ಕುಂಕುಮ ಹಾಕಿಕೊಂಡು ಬಂದ ವಿದ್ಯಾರ್ಥಿಯನ್ನು ತಡೆದ ಶಿಕ್ಷಕನನ್ನು ಕೂಡಲೇ ಅಮಾನತುಗೊಳಿಸಿ ಮನೆಗೆ ಕಳಿಸಿ ಎಂದು ಶಿಕ್ಷಣ ಸಚಿವರಿಗೆ ಮನವಿ ಮಾಡುತ್ತೇನೆ. ಇಲ್ಲದಿದ್ದರೆ ಎಲ್ಲರೂ ಕುಂಕುಮ, ವಿಭೂತಿ ಹಚ್ಚಿ ರಾಜ್ಯಾದ್ಯಂತ ಅಭಿಯಾನ ಮಾಡಬೇಕಾಗುತ್ತದೆ ಎಂದು ಮುತಾಲಿಕ್ ರವರು ಎಚ್ಚರಿಕೆ ನೀಡಿದ್ದಾರೆ.