';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ತಿರುವನಂತಪುರ: ಕೇರಳದ ಆಲಪ್ಪುಝ ಜಿಲ್ಲೆಯ ತ್ರಿಕುನ್ನಪುಳ ಸಮೀಪ ಬಿಜೆಪಿ ಕಾರ್ಯಕರ್ತ ಶರತ್ ಚಂದ್ರನ್ (26) ಎಂಬವರನ್ನು ಹತ್ಯೆ ಮಾಡಲಾಗಿದೆಯೆಂದು ತಿಳಿದು ಬಂದಿದೆ.
ದೇವಾಲಯದ ಉತ್ಸವದ ಸಂದರ್ಭ ಎರಡು ಗುಂಪುಗಳ ನಡುವೆ ನಡೆದ ವಿವಾದ ನಡೆದದ್ದೆ ಹತ್ಯೆಗೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳು ಸಿಪಿಎಂ ಕಾರ್ಯಕರ್ತರನ್ನೊಳಗೊಂಡ ಡ್ರಗ್ ಕಳ್ಳಸಾಗಣೆ ಗ್ಯಾಂಗ್ ಹತ್ಯೆಯಲ್ಲಿ ಶಾಮೀಲಾಗಿದೆ ಎಂದು ಬಿಜೆಪಿ ಈಗಾಗಲೇ ಆರೋಪಿಸಿದೆ.
ದೇಗುಲದ ಉತ್ಸವದ ವೇಳೆ ಘರ್ಷಣೆ ನಡೆದಿದ್ದು ಅದರ ಮುಂದುವರಿದ ಭಾಗವಾಗಿ ಶರತ್ ಚಂದ್ರನ್ ಅವರು ರಾತ್ರಿ 11ರ ಸುಮಾರಿಗೆ ಮನೆಗೆ ತೆರಳುತ್ತಿದ್ದಾಗ ಗುಂಪೊಂದು ಅವರ ಮೇಲೆ ದಾಳಿ ನಡೆಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ಸಂಬಂಧಿಸಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳೆಲ್ಲ ಡ್ರಗ್ ಕಳ್ಳಸಾಗಣೆ ಪ್ರಕರಣದಲ್ಲಿ ಶಾಮೀಲಾಗಿರುವ ಸಿಪಿಎಂ ಕಾರ್ಯಕರ್ತರು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್ ಆರೋಪಿಸಿದ್ದಾರೆ.