';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬೆಳ್ತಂಗಡಿ: ಸಹೋದರನ ಜೊತೆ ಸ್ನಾನಕ್ಕೆಂದು ಹೋಗಿದ್ದ ಯುವಕನೋರ್ವ ನದಿ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಘಟನೆ ಮುಂಡಾಜೆಯಲ್ಲಿ ನಿನ್ನೆ ನಡೆದಿದೆ.
ರವಿವಾರ ಸಂಜೆಯ ವೇಳೆ ಸಹೋದರನ ಜೊತೆ ನದಿಗೆ ಸ್ನಾನಕ್ಕೆ ಹೋಗಿದ್ದು, ಈ ವೇಳೆ ಆಕಸ್ಮಿಕವಾಗಿ ನೀರಿನ ಸೆಳೆತಕ್ಕೆ ಮುಳುಗಿದ್ದಾರೆ.
ನಾಪತ್ತೆಯಾಗಿದ್ದ ಯುವಕ ಇಂದು ಶವವಾಗಿ ಪತ್ತೆಯಾಗಿದ್ದು ಮೃತಪಟ್ಟ ಯುವಕನನ್ನು ಪುತ್ತೂರು ತಾಲೂಕಿನ ಕಬಕದ ಕಿರಣ್ ( 20) ಎಂದು ತಿಳಿದು ಬಂದಿದೆ.
ಕಿರಣ್ ತನ್ನ ಅಜ್ಜಿಮನೆ ಮುಂಡಾಜೆಯ ಪರಮುಖಕ್ಕೆ ಬಂದಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಪೊಲೀಸ್ ಮತ್ತು ಅಗ್ನಿಶಾಮಕ ಇಲಾಖೆಗೆ ಭೇಟಿ ನೀಡಿದ್ದು, ಇದೀಗ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.