ಶಿವಮೊಗ್ಗ: ನಗರದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ ಫೇಸ್ಬುಕ್ ಗ್ರೂಪ್ ಒಂದ್ ಪ್ರಚೋದನಾಕಾರಿ ಫೇಸ್ಬುಕ್ ಪೋಸ್ಟ್ ಹಂಚಿಕೊಂಡಿದೆ. ಮಂಗಳೂರು ಮುಸ್ಲಿಂಸ್ ಫೇಸ್ಬುಕ್ ಪೇಜ್ನಿಂದ ಪೋಸ್ಟ್ ಹಾಕಲಾಗಿದೆ. 2015ರಲ್ಲಿ ಪ್ರವಾದಿಗೆ ನಿಂದನೆ ಮಾಡಿದ್ದರಿಂದ ಕೊಲೆಯಾಗಿದೆ. ಪ್ರವಾದಿಗೆ ನಿಂದಿಸಿದ್ರೆ ಎಲ್ಲರಿಗೂ ಇದೇ ಸ್ಥಿತಿ ಎಂದು ಪೋಸ್ಟ್ ಹಂಚಿಕೊಳ್ಳಲಾಗಿದೆ. ಮಂಗಳೂರು ಮುಸ್ಲಿಂಸ್ ಪೇಜ್ ತಾನು 2015ರಲ್ಲೇ ಹರ್ಷ ಬಗ್ಗೆ ಬರೆದುಕೊಂಡಿದ್ದ ಫೇಸ್ಬುಕ್ ಪೋಸ್ಟ್ ಹಂಚಿಕೊಂಡಿದೆ. ಜೊತೆಗೆ ಅಂದು ಹಾಗೆ ಪ್ರವಾದಿ ನಿಂದಿಸಿದ್ದಕ್ಕೆ ಇಂದು ಹೀಗಾಗಿದೆ ಎಂದು ಹೇಳಿದೆ.
ಅಷ್ಟೇ ಅಲ್ಲದೆ, ಈ ಪ್ರಕರಣದ ಸತ್ಯಾಸತ್ಯತೆ ಬಯಲಾಗಬೇಕಾದರೆ ಕೆ.ಎಸ್. ಈಶ್ವರಪ್ಪ ಅವರನ್ನು ಬಂಧಿಸಿ ತನಿಖೆಗೆ ಒಳಪಡಿಸಿ. ಯಾವ ಮುಸ್ಲಿಂಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಲಾಗಿದೆ ಎಂದು ತಿಳಿಯುತ್ತದೆ ಎಂದು ಬರೆದುಕೊಂಡಿದ್ದಾರೆ.
ಈ ಮಧ್ಯೆ, ಶಿವಮೊಗ್ಗ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಶಿವಮೊಗ್ಗ ಗಲಾಟೆ ಸಂಬಂಧಿದಂತೆ ಸಾಮಾಜಿಕ ಜಾಲತಾಣದಲ್ಲಿ ಕೋಮುದ್ವೇಷದ ಸಂದೇಶ ಹರಡುವ ಪೋಸ್ಟ್ಗಳನ್ನು ಹಾಕಲಾಗುತ್ತಿದೆ. ಮಂಗಳೂರಿನಲ್ಲಿ ಕೋಮುದ್ವೇಷ ಹರಡುವ ಪೋಸ್ಟ್ಗಳು ಹಾಕಲಾಗುತ್ತಿದೆ. ನೂರಕ್ಕೂ ಹೆಚ್ಚು ಸಂಘಟನೆಗಳು, ವ್ಯಕ್ತಿಗಳು ಸೇರಿದಂತೆ 1064 ಪೇಜ್ಗಳನ್ನು, ಜನರನ್ನು ಕಳೆದ ಎರಡು ತಿಂಗಳಿಂದ ಗಮನಿಸುತ್ತಿದ್ದೇವೆ. ಸೋಷಿಯಲ್ ಮೀಡಿಯಾ ಸೆಲ್ ಗಮನಿಸುತ್ತಿದೆ. ಯಾರೇ ವಿಷ ಬೀಜ ಬಿತ್ತಿದ್ರು ಅವರನ್ನು ವಶಕ್ಕೆ ಪಡೆಯುತ್ತೇವೆ ಎಂದು ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣಲ್ಲೆ ಸಂಬಂಧಿಸಿ ಮಂಗಳೂರಿನಲ್ಲಿ ಪ್ರಚೋದನಾಕಾರಿ ಫೇಸ್ ಬುಕ್ ಪೋಸ್ಟ್ ಹಿನ್ನೆಲೆ ದೂರು ದಾಖಲು ಮಾಡಲಾಗಿದೆ. ಮಂಗಳೂರು ಮುಸ್ಲಿಂ ಪೇಜ್ ವಿರುದ್ಧ ದೂರು ದಾಖಲು ಮಾಡಲಾಗಿದೆ. ಸೆನ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಲಾಗಿದೆ. ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.