ಉಡುಪಿ: ಹಿಜಾಬ್ ಸಂಬಂಧ ಹೈಕೋರ್ಟ್ ಮೆಟ್ಟಿಲೇರಿರುವ ವಿದ್ಯಾರ್ಥಿನಿಯೊಬ್ಬಳ ತಂದೆಯ ಹೋಟೆಲಿಗೆ ಕಲ್ಲು ತೂರಾಟ ನಡೆಸಿ, ಸಹೋದರನಿಗೆ ಹಲ್ಲೆಗೈದಿರುವ ಘಟನೆ ನಿನ್ನೆರಾತ್ರಿ 9:30ರ ಸುಮಾರಿಗೆ ಮಲ್ಪೆಯಲ್ಲಿ ನಡೆದಿದೆ.
ಮಲ್ಪೆ ಪೇಟೆಯಲ್ಲಿರುವ ಹೈದರ್ ಅಲಿ ಎಂಬವರ ಬಿಸ್ಮಿಲ್ಲಾ ಹೋಟೆಲ್ ಗೆ ಆಗಮಿಸಿದ 100 -150 ಮಂದಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆನ್ನಲಾಗಿದೆ.
ಬಳಿಕ ದುಷ್ಕರ್ಮಿಗಳು ಹೊಟೇಲ್‌ನಲ್ಲಿ ಇದ್ದ ಅವರ ಮಗ 20 ವರ್ಷದ ಸೈಫ್ ಎಂಬುವವರಿಗೆ ಹಲ್ಲೆ ನಡೆಸಿದ್ದಾರೆ.
ಹಲ್ಲೆಗೆ ಒಳಗಾಗಿರುವ ಸೈಫ್ ಉಡುಪಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇದರಿಂದಾಗಿ ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಮಲ್ಪೆ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಸಂಘಪರಿವಾರದ ಗೂಂಡಾಗಳ ಮೇಲೆ ಕ್ರಮ ಕೈಗೊಳ್ಳಿ:
ಇನ್ನು ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ನನ್ನ ಸಹೋದರನ ಮೇಲೆ ಒಂದು ಗುಂಪಿನಿಂದ ಮಾರಣಾಂತಿಕ ಹಲ್ಲೆ ನಡೆದಿದೆ. ಹಿಜಾಬ್ ಹೋರಾಟದಲ್ಲಿ ನನ್ನ ಅಣ್ಣ ನನ್ನ ಪರವಾಗಿ ನಿಂತಿದ್ದ.ನಮ್ಮ ಅಪಾರ ಆಸ್ತಿ ಮತ್ತು ಸ್ವತ್ತುಗಳನ್ನು ಧ್ವಂಸ ಮಾಡಲಾಗಿದೆ.
ನಾನು ನನ್ನ ಧಾರ್ಮಿಕ ಹಕ್ಕನ್ನು ಕೇಳಬಾರದೆ? ಹಲ್ಲೆಕೋರರೇ ನಿಮ್ಮ ಮುಂದಿನ ಸಂತ್ರಸ್ತ ಯಾರು? ಸಂಘಪರಿವಾರದ ಗೂಂಡಾಗಳ ಮೇಲೆ ಕ್ರಮ ಕೈಗೊಳ್ಳಿ ಅಂತ ಉಡುಪಿ ಪೊಲೀಸರು ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಅಂತ ಹಸ್ರಾ ಶಿಫಾ ಮನವಿ ಮಾಡಿದ್ದಾರೆ.