dtvkannada

ಉಳ್ಳಾಲ: ಯುವತಿಯೋರ್ವಳು ನೇಣುಬಿಗಿದು ಸಾವನ್ನಪ್ಪಿರುವ ಘಟನೆ ಕುಂಪಲ ಬಲ್ಯ ಎಂಬಲ್ಲಿ ಸಂಭವಿಸಿದೆ.

ಕುಂಪಲ ಬಲ್ಯ ನಿವಾಸಿ ಹರ್ಷಿತಾ(21) ಸಾವನ್ನಪ್ಪಿದವರು.
ಮನೆಯ ಕೊಠಡಿಯಲ್ಲಿ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಹರ್ಷಿತಾ ಇಂದು ಬೆಳಿಗ್ಗೆ ಪತ್ತೆಯಾಗಿದ್ದಾಳೆ.

ಪ್ರಿಯಕರನೊಂದಿಗೆ ವಿರಸಗೊಂಡು ಮೊಬೈಲ್ ಸಂಭಾಷಣೆಯಲ್ಲಿದ್ದ ನಡುವೆ ನೇಣು ಹಾಕಿಕೊಂಡಿದ್ದು, ತಕ್ಷಣ ಸ್ಥಳಕ್ಕಾಗಮಿಸಿದ ಸ್ಥಳೀಯ ನಿವಾಸಿ ಪ್ರಿಯಕರ ಆಕೆಯನ್ನು ನೇಣಿನ ಕುಣಿಕೆಯಿಂದ ಕೆಳಗಿಳಿಸಿ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಿದ್ದಾನೆ.

ಆದರೆ ಇಂದು ಬೆಳಿಗ್ಗೆ ಹರ್ಷಿತಾ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By dtv

Leave a Reply

Your email address will not be published. Required fields are marked *

error: Content is protected !!