ವಿಟ್ಲ: ತನ್ನ ಮಗನನ್ನೆ ಮರದ ಸೋಂಟೆಯಿಂದ ತಲೆಗೆ ಹೊಡೆದು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಘಟನೆ ಚಂದಳಿಕೆ ಸಮೀಪದ ಕುರುಂಬಳ ಕಾಂತಮೂಲೆಯಲ್ಲಿ ಬುಧವಾರ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಕಾಂತಮೂಲೆ ನಿವಾಸಿ ದಿನೇಶ್(45) ಎಂದು ಗುರುತಿಸಲಾಗಿದೆ.ಆತನ ತಂದೆಯೇ ಕೊಲೆಗೈದಿರಬಹುದೆಂಬ ಸಂಶಯ ವ್ಯಕ್ತವಾಗಿತ್ತು. ಕುಡಿದು ಗಲಾಟೆ ಮಾಡಿ ಬಳಿಕ ತಂದೆ ಮಗನ ತಲೆಗೆ ಒಡೆದ ಪರಿಣಾಮ ರಕ್ತಸ್ರಾವವಾಗಿ ಮನೆಯಲ್ಲಿಯೇ ಮೃತ ಪಟ್ಟಿದ್ದಾನೆ.
ಕುಡಿದ ಮತ್ತಿನಲ್ಲಿ ಗಲಾಟೆ ನಡೆದು ಕೊಲೆಯಾಗಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ.
ದಿನೇಶ್‌ರವರ ಮೃತ ದೇಹ ಅವರ ಮನೆಯ ರೂಮ್‌ನಲ್ಲಿ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತರ ತಂದೆ ವಸಂತ ಗೌಡ ಹಾಗೂ ದಿನೇಶ್ ಇಬ್ಬರೇ ಮನೆಯಲ್ಲಿ ವಾಸವಾಗಿದ್ದು ಇಬ್ಬರಿಗೂ ಕುಡಿತದ ಚಟ ಇತ್ತು ಎನ್ನಲಾಗಿದೆ.
ಅಕ್ಕಪಕ್ಕದಲ್ಲಿ ಮನೆಗಳಿದ್ದರೂ ಈ ರೀತಿ ಘಟನೆ ಆಗಿದೆ ಎಂಬುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಮೃತರ ತಲೆ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ
ಬೆಳಿಗ್ಗೆಯಿಂದ ದಿನೇಶ್ ಮನೆಯಿಂದ ಹೊರಗೆ ಯಾಕೆ ಬಂದಿಲ್ಲ ಎಂದು ಸಂಶಯ ಗೊಂಡ ಸ್ಥಳೀಯರು ಹುಡುಕಿದಾಗ ಕೊಲೆಯಾದ ಸ್ಥಿತಿಯಲ್ಲಿ ಈತನ ಮೃತದೇಹ ಮನೆಯೊಳಗೆ ಪತ್ತೆಯಾಗಿದೆ.
ವಿಟ್ಲ ಪೋಲೀಸ್ ಇನ್ಸ್ ಪೆಕ್ಟರ್ ನಾಗರಾಜ್ ಎಚ್ ಅವರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿ ಕೊಂಡು ಮಾಹಿತಿ ಕಲೆ ಹಾಕುತ್ತಿದ್ದಾರೆ.