dtvkannada

ಕಡಬ: ವಿದ್ಯಾರ್ಥಿನಿಯೊಬ್ಬಳು ಅನಾರೋಗ್ಯದಿಂದ ಬಳಲುತ್ತಿದ್ದು ಇದೀಗ ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ ಘಟನೆ ಕಡಬ ತಾಲೂಕಿನ ಆಲಂಕಾರು ಎಂಬಲ್ಲಿ ನಡೆದಿದೆ.

ಮೃತಪಟ್ಟ ವಿದ್ಯಾರ್ಥಿನಿ ಆಲಂಕಾರು ಗ್ರಾಮದ ಕೊಂಡಾಡಿ ಜಗದೀಶ ಕುಂಬಾರರವರ ಪುತ್ರಿ ದೀಕ್ಷಾ (14) ಎಂದು ತಿಳಿದು ಬಂದಿದೆ.

ಈ ವಿದ್ಯಾರ್ಥಿನಿ ಆಲಂಕಾರು ದುರ್ಗಾಂಬಾ ಪ್ರೌಢಶಾಲೆಯ 9ನೇ ತರಗತಿಯಲ್ಲಿ ಕಲಿಯುತ್ತಿದ್ದು ದೀಕ್ಷಾ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.

ಈ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಮನೆಯಲ್ಲಿ ಚಿಕಿತ್ಸೆ ಮುಂದುವರಿಸುತ್ತಿದ್ದ, ಇವರು ಚಿಕಿತ್ಸೆ ಫಲಕಾರಿಯಾಗದೇ ಫೆ.24ರಂದು ನಿಧನರಾಗಿದ್ದಾರೆ.

ಈಕೆ ತಂದೆ ಜಗದೀಶ ಕುಂಬಾರ, ತಾಯಿ ಕವಿತಾ, ಅಣ್ಣ ದೀಕ್ಷೀತ್‌ ಅವರನ್ನು ಅಗಲಿದ್ದಾರೆಂದು ವರದಿಯಾಗಿದೆ.

By dtv

Leave a Reply

Your email address will not be published. Required fields are marked *

error: Content is protected !!