ತೆಕ್ಕಾರು: ಫೆ. 26 ಗ್ರಾಮ ಪಂಚಾಯತ್ ಕಛೇರಿಗಾಗಿ ಹೊಸದಾಗಿ ನಿರ್ಮಿಸಿದ ಮಹಡಿ ಕಟ್ಟಡವಿರುವ ಜಾಗದ ಸುತ್ತ ಬೇಲಿ ಹಾಕಿದ ಅದೇ ಪಂಚಾಯತ್ ಬಿಜೆಪಿ ಬೆಂಬಲಿತ ಸದಸ್ಯೆರೊಬ್ಬರು ವಾಸವಾಗಿರುವ ವಿಚಾರದ ಬಗ್ಗೆ SDPI ತೆಕ್ಕಾರು ಗ್ರಾಮ ಸಮಿತಿಯು ಸಭೆ ನಡೆಸಿದ್ದು ಪಂಚಾಯತ್ ಕಟ್ಟಡ ಉಳಿವಿಗಾಗಿ ಹೋರಾಟ ಮಾಡಲು ತೀರ್ಮಾನಿಸಿತು.
ಬೆಳ್ತಂಗಡಿ ವಿಧಾನ ಸಭಾ ಸಮಿತಿ ಸದಸ್ಯರಾದ ಇನಾಸ್ ರೋಡ್ರಿಗಸ್ ಅಧ್ಯಕ್ಷತೆಯಲ್ಲಿ ಪಂಚಾಯತ್ ಕಟ್ಟಡ ರಕ್ಷಿಸಿ ಹೋರಾಟ ಸಮಿತಿಯನ್ನು ರಚಿಸಿಲಾಯಿತು.
ಮೊದಲ ಹಂತದಲ್ಲಿ ಸದ್ರಿ ಪಂಚಾಯತ್ ಅಧ್ಯಕ್ಷರು ಹಾಗೂ ಪಿಡಿಓ ರವರನ್ನು ಭೇಟಿ ಮಾಡಿ ಒಂದು ವಾರದೊಳಗೆ ಈ ಪ್ರಕರಣವನ್ನು ಸರಿಪಡಿಸಿ ಅಲ್ಲಿ ಬೇಲಿ ಹಾಕಿ ಬೀಡು ಬಿಟ್ಟಿರುವವರನ್ನು ಎಬ್ಬಿಸಿ ಕೂಡಲೇ ಕಟ್ಟಡದ ಕಾಮಗಾರಿಯನ್ನು ಮುಂದುವರಿಸಲು ಮನವಿ ಮಾಡಲು ಸಭೆಯು ತೀರ್ಮಾನಿಸಿತು.
ಒಂದು ವಾರದೊಳಗೆ ಸರಿಪಡಿಸದೇ ಹೋದರೆ ಗ್ರಾಮದ ಜನರನ್ನು ಒಗ್ಗೂಡಿಸಿ ದೊಡ್ಡ ಮಟ್ಟದ ಹೋರಾಟವನ್ನು ನಡೆಸುವುದಾಗಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಈ ಸಭೆಯಲ್ಲಿ ವಿಧಾನ ಸಭಾ ಉಪಾಧ್ಯಕ್ಷರಾದ ಹನೀಫ್ ಪೂಂಜಾಲಕಟ್ಟೆ, ಸಂಘಟನಾ ಕಾರ್ಯದರ್ಶಿ ಹನೀಫ್ ಟಿ.ಎಸ್, ಸದಸ್ಯರಾದ ಇನಾಸ್ ರೋಡ್ರಿಗಸ್, ಇಳಂತಿಲ ಬ್ಲಾಕ್ ಕಾರ್ಯದರ್ಶಿ ಫೈಝಲ್ ಮೂರುಗೋಳಿ, ತೆಕ್ಕಾರು ಗ್ರಾಮ ಸಮಿತಿ ಅಧ್ಯಕ್ಷರಾದ ನಝೀರ್ ಹಾಗೂ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.