';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಕೋಲ್ಕತ್ತಾ: ಕಳೆದ ಕೆಲ ತಿಂಗಳುಗಳ ಹಿಂದೆ ಜಗತ್ತಿನಾದ್ಯಂತ ವೈರಲ್ ಆದ ಕಚ್ಚಾ ಬಾದಮ್ ಹಾಡಿನ ಗಾಯಕ ಭುವನ್ ಬಡ್ಯಾಕರ್ ಅವರ ಕಾರು ಅಪಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ವರದಿಯಾಗಿದೆ.
ದ್ವಿಚಕ್ರ ವಾಹನಗಳಲ್ಲಿ ಓಡಾಡುತ್ತಿದ್ದ ಭುವನ್ ಅವರು ತನ್ನ ಕಚ್ಚಾ ಬಾದಾಮ್ ಹಾಡಿನ ಮೂಲಕ ಪರಿಚಯವಾಗಿ ಅದನ್ನು ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಿ ದಾಖಲೆಯ ವಿಕ್ಷಣೆ ಕೂಡ ನಡೆದಿತ್ತು.
ತದನಂತರ ಈ ಹಾಡನ್ನು ಹಾಡಿಸಿಕೊಂಡ ಸಂಸ್ಥೆಯಿಂದ ಇತ್ತೀಚೆಗೆ ಗಾಯಕನಿಗೆ ಲಕ್ಷದಷ್ಟು ಹಣ ಕೂಡ ಅವರ ಕೈ ಸೇರಿತ್ತು.
ಇತ್ತೀಚೆಗೆ ಖರೀದಿಸಿದ ತಮ್ಮ ಸೆಕೆಂಡ್ ಹ್ಯಾಂಡ್ ಕಾರನ್ನು ಹೇಗೆ ಓಡಿಸಬೇಕೆಂದು ಕಲಿಯುತ್ತಿದ್ದಾಗ ಈ ಘಟನೆ ನಡೆದಿದ್ದು ಈ ವೇಳೆ ಎದೆನೋವು ಕಾಣಿಸಿಕೊಂಡಿದ್ದು, ಸದ್ಯ ಅವರನ್ನು ಸೂರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಶ್ಚಿಮ ಬಂಗಾಳದ ಬೀರ್ಭುಮ್ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಕಡಲೆಕಾಯಿ ಮಾರಾಟ ಮಾಡುವ ಮೂಲಕ ಖರೀದಿದಾರರನ್ನು ಆಕರ್ಷಿಸಲು ಬಡ್ಯಾಕರ್ ಕಚಾ ಬಾದಮ್ ಹಾಡನ್ನು ಹಾಡುತ್ತಿದ್ದರು.