dtvkannada

'; } else { echo "Sorry! You are Blocked from seeing the Ads"; } ?>

ಮಂಗಳೂರು: ರಾಜ್ಯ ಸರಕಾರದ ಮತಾಂತರ ತಡೆ ಕಾಯಿದೆ ವಿರೋಧಿಸಿ ಹಾಗೂ ಕ್ರೈಸ್ತ ಸಮುದಾಯ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಎಲ್ಲಾ ಚರ್ಚ್‌ಗಳ ವ್ಯಾಪ್ತಿಯಲ್ಲಿ ಹೊಂಬತ್ತಿ ಹಿಡಿದು ಶಾಂತಿಯುತ ಪ್ರತಿಭಟನೆ ಹಾಗೂ ಮಾನವ ಸರಪಳಿ ನಡೆಯಿತು.

ಬಂಟ್ವಾಳ ಹಾಗೂ ಮೊಗರ್ನಾಡ್‌ ವಲಯದ ವತಿಯಿಂದ ಬಂಟ್ವಾಳದ ಬಿ.ಸಿರೋಡ್‌ನ ಬೈಪಾಸ್‌ ಸರ್ಕಲ್‌ ಬಳಿ ನಡೆದ ಪ್ರತಿಭಟನೆಯಲ್ಲಿ ಮಂಗಳೂರು ಕಥೋಲಿಕ್‌ ಸಭಾದ ಕೇಂದ್ರೀಯ ಸಮಿತಿ ಅಧ್ಯಕ್ಷ ಸ್ಟ್ಯಾನ್ಲಿ ಲೋಬೋ ಮಾತನಾಡಿ, ಪಂಜಿಮೊಗರು ಪ್ರಾರ್ಥನಾ ಮಂದಿರಕ್ಕೆ ಡಿಸಿ ಹಾಗೂ ಕೋರ್ಟ್‌ನಿಂದ ಸ್ಟೇ ಆರ್ಡರ್‌ ಇದ್ದರೂ ಹಗಲಿನಲ್ಲೇ ಕೆಡವಿದ್ದಾರೆ. ಈ ಬಗ್ಗೆ ದೂರು ನೀಡಿದಾಗ ಪೊಲೀಸರು ದೂರು ಸ್ವೀಕರಿಸಿಲ್ಲ. ನಂತರ ಪೊಲೀಸ್‌ ಕಮೀಷನರ್‌ಗೆ ಪೋನ್‌ ಮುಖಾಂತರ ಹೇಳಿದಾಗ ಪೊಲೀಸರು ಸ್ಥಳಕ್ಕೆ ಬಂದರು.

'; } else { echo "Sorry! You are Blocked from seeing the Ads"; } ?>

ಜೊತೆಗೆ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾದರರೂ ಬೇರೆಯದ್ದೇ ಹೇಳಿಕೆ ನೀಡಿದ್ದಾರೆಂದು ಆರೋಪಿಸಿದರು. ಅದನ್ನು ಅಂಗನವಾಡಿ ಕಟ್ಟಡ ಎಂದು ಹೇಳುತ್ತಿದ್ದಾರೆ.ಅಲ್ಲಿ 42 ವರ್ಷದಿಂದ ಪ್ರಾರ್ಥನಾ ಮಂದಿರದ ಕಟ್ಟಡ ಇದೆ. ಅಲ್ಲಿ ಬೆರಳು ಕೊಟ್ಟಿದ್ದಕ್ಕೆ ಕೈಯನ್ನೇ ನುಂಗಿದ್ದಾರೆ ಎಂದ ಅವರು 2021ರ ಸರ್ಕಾರದ ಕಾನೂನಿನಲ್ಲಿ ಪ್ರಾರ್ಥನಾ ಮಂದಿರದಲ್ಲಿ ಕೆಡವಲು ಅವಕಾಶವಿಲ್ಲ. ಹಾಗಾದರೆ ಅದನ್ನು ಕೆಡವಿದರೆ ಯಾರು? ನಾವು ಈ ಬಗ್ಗೆ ಪ್ರತಿಭಟನೆ ನಡೆಸಿದೆವು. ಪ್ರತಿಭಟನೆಯ ನಂತರ ಇಬ್ಬರನ್ನು ಬಂಧಿಸಿದರು.

ಅವರು ಮಾವನ ಮನೆಗೆ ಬಂದು ಹೋದ ಹಾಗೆ ಎರಡೇ ದಿನದಲ್ಲಿ ಬಂದು ಹೋಗಿದ್ದಾರೆ. ನಾವು ಕೊಟ್ಟ ದೂರಿಗೆ ಎಫ್‌ಐಆರ್‌ ದಾಖಲಿಸಿಲ್ಲ. ತದನಂತರ ಎಫ್‌ಐಆರ್‌ ಮಾಡಿದ್ದಾರೆ. ಮುಂದಿನ ದಿವಸಗಳಲ್ಲಿ ಈ ಬಗ್ಗೆ ಉಗ್ರ ಪ್ರತಿಭಟನೆ ನಡೆಸಲಿದ್ದೇವೆ ಎಂದರು. ಪ್ರತಿಭಟನೆಯಲ್ಲಿ ರಾಯ್‌ ಕ್ಯಾಸ್ತಲಿನೋ ಸೇರಿದಂತೆ ಹಲವರು ಭಾಗವಹಿಸಿದ್ದರು.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!