';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಸುಳ್ಯ: ಮನೆ ಕೆಲಸ ನಿರ್ಮಾಣದ ಕಟ್ಟಿಂಗ್ ಮೆಷಿನ್ ತಾಗಿ ಗಂಭೀರ ಗಾಯಗೊಂಡು ಕಾರ್ಮಿಕನೋರ್ವ ಮೃತಪಟ್ಟ ಘಟನೆ ದ. ಕ ಜಿಲ್ಲೆಯ ಸುಳ್ಯ ತಾಲೂಕಿನ ಐವರ್ನಾಡಿನಲ್ಲಿ ನಡೆದಿದೆ.
ಐವರ್ನಾಡು ನಾಟಿಕೇರಿ ನಿವಾಸಿ ದಯಾನಂದ (36) ಮೃತಪಟ್ಟ ದುರ್ದೈವಿಎಂದು ತಿಳಿದು ಬಂದಿದೆ.
ದಯಾನಂದ ಅವರು ಮಡ್ತಿಲ ಎಂಬಲ್ಲಿ ಮನೆ ನಿರ್ಮಾಣ ಕೆಲಸ ನಿರ್ವಹಿಸುತ್ತಿದ್ದರು.ನಿನ್ನೆ ಮಧ್ಯಾಹ್ನ ಮೆಶಿನ್ ನಲ್ಲಿ ಹಲಗೆ ಕತ್ತರಿಸುತ್ತಿದ್ದ ಸಂದರ್ಭದಲ್ಲಿ ಮೆಶಿನ್ ಆಕಸ್ಮಿಕವಾಗಿ ಕೈಯಿಂದ ತಪ್ಪಿ ತೊಡೆಯ ಬಾಗಕ್ಕೆ ತಾಗಿದೆ.
ಗಂಭೀರ ಗಾಯಗೊಂಡಿದ್ದ ಇವರನ್ನು ಸುಳ್ಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ತೀವ್ರ ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತರು ತಾಯಿ, ಪತ್ನಿ, ಪುತ್ರ , ಪುತ್ರಿಯನ್ನು ಅಗಲಿದ್ದಾರೆ. ಮೃತರ ತಾಯಿ ನೀಡಿದ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.