ಪುತ್ತೂರು: ಪುತ್ತೂರು ಬಸ್ಸು ನಿಲ್ದಾಣದಲ್ಲಿ ಕೇರಳ ಸಾರಿಗೆಯ ಮಲಬಾರ್ ಬಸ್ಸ್ ಚಾಲಕನೋರ್ವ ಮುಸ್ಲಿಂ ಮಹಿಳೆಯರಿಗೆ ಚುಡಾಯಿಸಿ ಮುಸ್ಲಿಂ ಮಹಿಳೆಯರಿಂದ ಧರ್ಮದೇಟು ತಿಂದಿರುವ ಘಟನೆ ಪುತ್ತೂರು ಬಸ್ಸು ನಿಲ್ದಾಣದಲ್ಲಿ ಇಂದು ಸಂಜೆ ನಡೆದಿದೆ.

ಕಾಸರಗೋಡಿಂದ ಪುತ್ತೂರಿಗೆ ಬರುತ್ತಿದ್ದ ಮಲಬಾರ್ ಸಾರಿಗೆ ಬಸ್ಸಿನ ಅನ್ಯಕೋಮಿನ ಚಾಲಕ ಪುತ್ತೂರಿನ ಬಸ್ಸು ನಿಲ್ದಾಣದಲ್ಲಿದ್ದ ಇಬ್ಬರು ಮುಸ್ಲಿಂ ಮಹಿಳೆಯರಿಗೆ ನಂಬರ್ ನೀಡಿ ಚುಡಾಯಿಸಿ ಪರಾರಿಯಾಗಲು ಯತ್ನಿಸಿದ್ದ ಎನ್ನಲಾಗಿದೆ.

ಚಾಲಕನ ವರ್ತನೆಯಿಂದ ರೊಚ್ಚಿಗೆದ್ದ ಮಹಿಳೆಯರು ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಸಾರ್ವಜನಿಕರ ಸಹಕಾರದೊಂದಿಗೆ ಹಿಡಿದು ಬಸ್ಸು ನಿಲ್ದಾಣದಲ್ಲೆ ಧರ್ಮದೇಟು ನೀಡಿದ್ದು, ನಂತರ ಪೋಲಿಸರು ಆಗಮಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.