dtvkannada

ಬೆಳಗಾವಿ: ರಾಯಚೂರಿನ ಎಸ್‌ಎಲ್‌ಎನ್ ಕಾಲೇಜು ಬಿಇ ಸಿವಿಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಬುಶ್ರಾ ಮತೀನ್ ವಿಟಿಯುನ ಒಟ್ಟು 16 ಚಿನ್ನದ ಪದಕಗಳನ್ನು ಪಡೆದು ದಾಖಲೆ ಬರೆದಿದ್ದಾರೆ.

ವಾರ್ಷಿಕ ಘಟಿಕೋತ್ಸವದ ಕುರಿತು ಪತ್ರಿಕಾಗೋಷ್ಟಿ ನಡೆಸಿದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕರಿಸಿದ್ದಪ್ಪ, 21ನೇ ವರ್ಷದ ಘಟಿಕೋತ್ಸವವನ್ನು ಮಾರ್ಚ್ 10 ರಂದು ‘ಜ್ಞಾನಸಂಗಮ’ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. 

ರಾಯಚೂರಿನ ಎಸ್‌ಎಲ್‌ಎನ್ ಕಾಲೇಜಿನ ಬಿಇ ಸಿವಿಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಬುಶ್ರಾ ಮತೀನ್ ಒಟ್ಟು 16 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ವಿಶ್ವವಿದ್ಯಾಲಯದ ಇತಿಹಾಸದಲ್ಲೇ ಇದು ದಾಖಲೆಯಾಗಿದೆ. ಈವರೆಗೆ ಅತಿ ಹೆಚ್ಚು ಅಂದರೆ 13 ಚಿನ್ನದ ಪದಕಗಳನ್ನು ಗಳಿಸಿದ ದಾಖಲೆ ಇತ್ತು’ ಎಂದು ಕುಲಪತಿ ತಿಳಿಸಿದರು.‌

ಬೆಂಗಳೂರು ಬಿ.ಎನ್.ಎಂ. ತಾಂತ್ರಿಕ ಸಂಸ್ಥೆಯ ಇ ಅಂಡ್ ಸಿ ವಿಭಾಗದ ಸ್ವಾತಿ ದಯಾನಂದ, ಬೆಳಗಾವಿಯ ಕೆ.ಎಲ್.ಇ. ಡಾ.ಎಂ.ಎಸ್. ಶೇಷಗಿರಿ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್‌ ಎಂಜಿನಿಯರಿಂಗ್ ವಿಭಾಗದ ವಿವೇಕ್ ಭದ್ರಕಾಳಿ, ಬಳ್ಳಾರಿಯ ಬಳ್ಳಾರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್‌ನ ಇ ಅಂಡ್ ಇ ವಿಭಾಗದ ಚಂದನಾ ಎಂ. ತಲಾ 7 ಚಿನ್ನದ ಪದಕ ಪಡೆದಿದ್ದಾರೆ.

ಬೆಂಗಳೂರಿನ ಸಿಎಂಆರ್ ತಾಂತ್ರಿಕ ಕಾಲೇಜಿನ ಕಂಪ್ಯೂಟರ್‌ ಸೈನ್ಸ್ ಅಂಡ್ ಎಂಜಿನಿಯರಿಂಗ್‌ನ ರಮ್ಯಾ ಟಿ. 6, ಆರ್‌ಎನ್‌ಎಸ್‌ಐಟಿಯ ಎಲೆಕ್ಟ್ರಾನಿಕ್ಸ್ ಅಂಡ್ ಇನ್‌ಸ್ಟ್ರುಮೆಂಟೇಷನ್‌ ವಿಭಾಗದ ಪ್ರಜ್ಞಾ ಎನ್., ಶಿವಮೊಗ್ಗದ ಜೆಎನ್‌ಎನ್‌ಸಿಇ ಮಾಹಿತಿ ತಂತ್ರಜ್ಞಾನ ವಿಭಾಗದ ಪಲ್ಲವಿ ಮತ್ತು ಬೆಂಗಳೂರಿನ ಆರ್‌ಎನ್‌ಎಸ್‌ಐಟಿಯ ಎಂಬಿಎ ವಿದ್ಯಾರ್ಥಿನಿ ತೇಜಸ್ವಿನಿ ಆರ್. ತಲಾ 4 ಚಿನ್ನದ ಪದಕಗಳನ್ನು ಗಳಿಸಿದ್ದಾರೆ.

ಬೆಂಗಳೂರಿನ ಆರ್‌ಎನ್‌ಎಸ್‌ಐಟಿಯ ಎಂಸಿಎ ವಿದ್ಯಾರ್ಥಿನಿ ಅಶ್ವಿತಾ ಎನ್. ಮತ್ತು ದಾವಣಗೆರೆಯ ಯುಬಿಡಿಟಿ ಕಾಲೇಜಿನ ಎಂ.ಟೆಕ್. ವಿದ್ಯಾರ್ಥಿನಿ ಸವಿತಾ ಎಚ್.ಟಿ. ತಲಾ 3 ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.

57,498 ಬಿಇ/ಬಿ.ಟೆಕ್, 902 ಬಿ.ಆರ್ಕ್.,‌ 12 ಬಿ ಪ್ಲಾನ್, 4,362 ಎಂಬಿಎ, 1,387 ಎಂಸಿಎ, 1,292 ಎಂ.ಟೆಕ್, 73 ಎಂ.ಆರ್ಕ್. ಮತ್ತು 33 ಪಿಜಿ ಡಿಪ್ಲೊಮಾ ಪದವಿಗಳನ್ನು ಪ್ರದಾನ ಮಾಡಲಾಗುವುದು. ಯಶಸ್ವಿಯಾಗಿ ಸಂಶೋಧನಾ ಅಧ್ಯಯನ ಮುಗಿಸಿದ ಸಂಶೋಧನಾರ್ಥಿಗಳಿಗೆ 515 ಪಿಎಚ್.ಡಿ., 4 ಎಂ.ಎಸ್ಸಿ. (ಎಂಜಿನಿಯರಿಂಗ್) ಬೈ ರಿಸರ್ಚ್ ಮತ್ತು 3 ಇಂಟಿಗ್ರೇಟೆಡ್‌ ಡುಯೆಲ್ ಡಿಗ್ರಿ ಪದವಿಗಳನ್ನು ಪ್ರದಾನ ಮಾಡಲಾಗುತ್ತದೆ ಎಂದು‌ ವಿವರ ನೀಡಿದರು.

By dtv

Leave a Reply

Your email address will not be published. Required fields are marked *

error: Content is protected !!