ಪುತ್ತೂರು: ಸರ್ಕಾರಿ ಶಾಲೆ ಉಳಿಯಬೇಕು ಅದು ಈ ಸಮಾಜದ ಮಹತ್ವದ ಕಣ್ಣಾಗಿದೆ ಖಾಸಗಿ ಶಾಲೆಗಳ ಒಲವುಗಳನ್ನು ಕಡಿಮೆಯಾಗಿಸಿ ಸರ್ಕಾರಿ ಶಾಲೆಗಳತ್ತ ವಿದ್ಯಾರ್ಥಿಗಳ ಹೆಜ್ಜೆಗಳನ್ನು ಮುಂದಿಡಲು ಎಸ್.ಡಿ.ಎಂ.ಸಿ ಸದಸ್ಯರು ಮಹತ್ವದ ಹೆಜ್ಜೆ ಹಾಕಬೇಕೆಂದು ಶ್ರೀ ನಳಿನಿ ಲೋಕಪ್ಪ ಗೌಡ ರವರು ನಿನ್ನೆ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಮನ್ವಯ ವೇದಿಕೆ ದ.ಕ ಜಿಲ್ಲೆ ವತಿಯಿಂದ ನಡೆದ ನರಿಮೊಗರು ಕ್ಲಸ್ಟರ್ ಮಟ್ಟದ SDMC ಸದಸ್ಯರ ಕಾರ್ಯಾಗಾರ ಮತ್ತು ಸಂವಾದ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಗಾಟಿಸಿ ಅವರು ಮಾತನಾಡಿದರು.
ಶಾಲೆಯ ಅಭಿವೃದ್ಧಿ ಕಾರ್ಯಗಳಲ್ಲಿ ನಾನು ತಮ್ಮ ಜೊತೆ ಯಾವಾಗಲೂ ಇರುತ್ತೇನೆ, ಸರ್ಕಾರಿ ಶಾಲೆಗಳು ಉಳಿಯಬೇಕು ಅದಕ್ಕೆ ಬೇಕಾಗುವ ನನ್ನಿಂದಾಗುವ ಎಲ್ಲಾ ಸಹಾಯ, ಸಹಕಾರಗಳನ್ನು ನಾನು ಖಂಡಿತಾ ನೀಡುತ್ತೇನೆ ಎಂದು ಅವರು ಹೇಳಿದರು.
ಶುಭಾಶ್ ಚಂದ್ರ ಶೆಣೈ ಪ್ರಾಸ್ತಾವಿಕ ಮಾತನಾಡಿದರು.
S,D,M,C ರಾಜ್ಯಾಧ್ಯಕ್ಷ ಮೊಯ್ದಿನ್ ಕುಟ್ಟಿ ಕಾರ್ಯಾಗಾರ ನಡೆಸಿದರು.
ಕಾರ್ಯಕ್ರಮದಲ್ಲಿ ಉಮೇಶ್.ಎಂ, SDMC ಜಿಲ್ಲಾಧ್ಯಕ್ಷ ಇಸ್ಮಾಯಿಲ್, ಜಿಲ್ಲಾ ಸಮನ್ವಯ ವೇದಿಕೆ ಕಾರ್ಯದರ್ಶಿ ಸಲಿಕತ್ ಕೆಮ್ಮಾರ, ಜಿಲ್ಲಾ ಸಮನ್ವಯ ಸದಸ್ಯರಾದ ಉಸ್ಮಾನ್ ನೆಕ್ಕಿಲು, ಮತ್ತು ಸಲೀಮ್ ಮಾಯಂಗಾಲ ಉಪಸ್ಥಿತರಿದ್ದರು.
ನರಿಮೊಗರು ಶಾಲಾಭಿವೃದ್ಧಿ ಅಧ್ಯಕ್ಷ ಕೃಷ್ಣರಾಜ,ಡಿ ಅಧ್ಯಕ್ಷತೆ ವಹಿಸಿದರು. SDMC ಜಿಲ್ಲಾ ಕೋಶಾಧಿಕಾರಿ ವೆಂಕಟ್ರಮಣ ಸ್ವಾಗತಿಸಿ ವಂದಿಸಿದರು.
S,D,M,C ಸಮನ್ವಯ ವೇದಿಕೆಯ ಪ್ರವೀಣ್ ಆಚಾರ್ಯ ರವರು ಕಾರ್ಯಕ್ರಮ ಆಯೋಜನೆ ಮಾಡಿದರು.