dtvkannada

ಮಡಿಕೇರಿ: ನಿಯಂತ್ರಣ ತಪ್ಪಿ ಲಾರಿಯೊಂದು ಮನೆಗೆ ನುಗ್ಗಿದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ಸಮೀಪ ಮದೆನಾಡುವಿನಲ್ಲಿ ನಡೆದಿದೆ.

ಬೆಳಗ್ಗೆ ಸುಮಾರು 8.45ರ ವೇಳೆ ಘಟನೆ ನಡೆದಿದ್ದು, ಮಾದಪ್ಪ ಎಂಬುವವರ ಮನೆಗೆ ಲಾರಿ ನುಗ್ಗಿದೆ.

ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಲಾರಿ ಮುಖ್ಯರಸ್ತೆಯಲ್ಲೇ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದಲ್ಲಿದ್ದ ಮನೆಗೆ ನುಗ್ಗಿದೆ.

ಸದ್ಯ ಲಾರಿ ನುಗ್ಗಿದ ಪರಿಣಾಮ ಮನೆ ಸಂಪೂರ್ಣ ಕುಸಿತ ಕಂಡಿದೆ. ಲಾರಿ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!