ಪುತ್ತೂರು: ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಈಶ್ವರಮಂಗಲದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕ ಈಶ್ವರಮಂಗಲದ ಮೈಯಳ ನಿವಾಸಿ ಜೀವನ್(24) ಎಂದು ತಿಳಿದು ಬಂದಿದೆ.
ಮೃತಪಟ್ಟ ಜೀವನ್ ಲೈಟಿಂಗ್ಸ್, ಸೌಂಡ್ಸ್, ಶಾಮಿಯಾನ ಮುಂತಾದ ಕೆಲಸ ನಿರ್ವಹಿಸುತ್ತಿದ್ದರೆಂದು ತಿಳಿದು ಬಂದಿದೆ.
ಇವರು ದೇಲಂಪಾಡಿ ಹಿಂದೂ ಐಕ್ಯ ವೇದಿಕೆ ಘಟಕದ ಸಕ್ರಿಯ ಕಾರ್ಯಯಕರ್ತರಾಗಿದ್ದು ಇವರನ್ನು ಕಳೆದುಕೊಂಡ ಐಕ್ಯ ವೇದಿಕೆಗೆ ತುಂಬಾಲಾರದ ನಷ್ಟವಾಗಿದೆ ಇದು ಎಂಬ ಮಾತುಗಳು ಕೇಳಿ ಬರುತ್ತಿದ್ದು ಸಂಘದ ಹಲವು ಕಾರ್ಯಕರ್ತರು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

ಆತ್ಮಹತ್ಯೆ ನಡೆಸಲು ಕಾರಣವೆನೆಂದು ಇನ್ನೂ ನಿಗೂಢವಾಗಿ ಉಳಿದಿದ್ದು.ಪೊಲೀಸರ ತನಿಖೆಯಿಂದಷ್ಟೇ ಹೆಚ್ಚಿನ ಮಾಹಿತಿ ತಿಳಿಯಬೇಕಾಗಿದೆ.
ಮೃತರು ತಂದೆ, ತಾಯಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
