ಪುತ್ತೂರು: ತಾಲೂಕಿನ ಮಾಡಾವು ಸಮೀಪದ ಕೆಯ್ಯೂರಿನಲ್ಲಿ ವಿಶ್ವಹಿಂದು ಪರಿಷತ್ ಬಜರಂಗದಳ ಸಂಘಟನೆ ಕೋಮು ಪ್ರಚೋದನಕಾರಿ ವಿವಾದಾತ್ಮಕ ಬ್ಯಾನರ್ ಅಳವಡಿಸಿದ್ದು, ಇದೀಗ ಪೊಲೀಸರು ವಿವಾದಾತ್ಮಕ ಬ್ಯಾನರನ್ನು ತೆರವುಗೊಳಿಸಿದ ಘಟನೆ ನಡೆದಿದೆ.
ವಿಶ್ವಹಿಂದು ಪರಿಷತ್ ಹಾಗೂ ಬಜರಂಗದಳ ಕೆಯ್ಯೂರು ಎಂಬ ಹೆಸರಿನಲ್ಲಿ “ಸವಾಲುಗಳಿಗೆ ಎದೆಯೊಡ್ಡಿ ನಿಲ್ಲಲು ನಾವು ಸಿದ್ದ, ಹಿಂದೂ ರಾಷ್ಟ್ರ ನಿರ್ಮಿಸಲು ನಾವು ಬದ್ದ, ಇದು ಹಿಂದು ರಾಷ್ಟ್ರ ಎಂಬ ಬರಹವುಳ್ಳ ಬ್ಯಾನರನ್ನು ಅಳವಡಿಸಲಾಗಿದೆ.
ಈ ವಿವಾದಾತ್ಮಕ ಬ್ಯಾನರ್ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ, ಸಂಪ್ಯ ಗ್ರಾಮಾಂತರ ಪೊಲೀಸರು ಬ್ಯಾನರನ್ನು ತೆರವುಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಟ್ವೀಟ್ ಮಾಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಪುತ್ತೂರು ಜಿಲ್ಲಾ ಸಮಿತಿ ಅಧ್ಯಕ್ಷ ಜಾಬಿರ್ ಅರಿಯಡ್ಕ, ಜಾತ್ಯಾತೀತ ರಾಷ್ಟ್ರವಾದ ಭಾರತವನ್ನು ಹಿಂದು ರಾಷ್ಟ್ರ ಎಂದು ದೇಶದ್ರೋಹದ ಬರಹ ಬರೆದು ಪುತ್ತೂರು ತಾಲೂಕಿನ ಕೆಯ್ಯೂರಿನಲ್ಲಿ ಬ್ಯಾನರ್ ಹಾಕಿದನ್ನು ತೆರವುಗೊಳಿಸಿದ ಪೋಲೀಸರ ಕ್ರಮ ಶ್ಲಾಘನೀಯವಾಗಿದ್ದರೂ, ದೇಶದ್ರೋಹ ಕೃತ್ಯ ಎಸಗಿ ಗಲಭೆಗೆ ಪ್ರಚೋದನೆ ನೀಡಲು ಯತ್ನಿಸಿದ ಕೆಯ್ಯೂರಿನ ಭಜರಂಗದಳದ ಘಟಕದ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.