';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬಾಗಲಕೋಟೆ: ಕಾಂಗ್ರೆಸ್ ಸದಸ್ಯತ್ವ ಹೆಚ್ಚಿಗೆ ಮಾಡಿಸಿದ ಕಾರ್ಯಕರ್ತರಿಗೆ ಪ್ರೈಜ್ ನೀಡುವ ಮೂಲಕ ಮಾಜಿ ಸಿಎಂ ಹಾಗೂ ಹಾಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಬಂಪರ್ ಆಫರ್ ಘೋಷಿಸಲಾಗಿದೆ.
ಬ್ಲಾಕ್ ಕಾಂಗ್ರೆಸ್ನಿಂದ ಫ್ರಿಡ್ಜ್, LED ಟಿವಿ, ಮೊಬೈಲ್ ಗಿಫ್ಟ್ ಕೊಡುವ ಬಗ್ಗೆ ಮಾಹಿತಿ ಲಭಿಸಿದೆ.
ಬಾಗಲಕೋಟೆ ಜಿಲ್ಲೆ ಬಾದಾಮಿ ಕ್ಷೇತ್ರದಲ್ಲಿ ಬಂಪರ್ ಆಫರ್ ನೀಡಲಾಗಿದೆ. 5 ಸಾವಿರ ಸದಸ್ಯತ್ವ ಮಾಡಿಸಿದರೆ ಮೊದಲ ಬಹುಮಾನವಾಗಿ ಫ್ರಿಡ್ಜ್ ನೀಡಲಾಗುತ್ತದೆ. ಮೂರು ಸಾವಿರ ಸದಸ್ಯತ್ವ ಮಾಡಿಸಿದರೆ ಎಲ್ಇಡಿ ಟಿವಿ ಹಾಗೂ ಎರಡು ಸಾವಿರ ಸದಸ್ಯತ್ವ ಮಾಡಿಸಿದರೆ ಮೊಬೈಲ್ ಗಿಫ್ಟ್ ನೀಡಲಾಗುತ್ತಿರುವ ಬಗ್ಗೆ ತಿಳಿದುಬಂದಿದೆ.
ಮಾರ್ಚ್ 1ರಿಂದ ಆರಂಭವಾಗಿರುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನ, ಮಾರ್ಚ್ 31ರ ವರೆಗೆ ನಡೆಯಲಿದೆ.