dtvkannada

ಉಪ್ಪಿನಂಗಡಿ: ಇತಿಹಾಸ ಪ್ರಸಿದ್ಧ ಮೂಡಡ್ಕ ತೆಕ್ಕಾರು ಉರೂಸ್ ಕಾರ್ಯಕ್ರಮ ಇಂದು ಐತಿಹಾಸಿಕವಾಗಿ ಸಮಾರೋಪ ಗೊಂಡಿತು.

ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮಕ್ಕೆ ಆದಿತ್ಯವಾರ ಪ್ರೌಢ ಸಮಾಪ್ತಿಗೊಂಡಿತು.
ರೋಗ, ರುಜಿನ ಕಷ್ಟ ಕಾರ್ಪಣ್ಯ ದುಃಖ ದುಮ್ಮಾನಗಳಿಗೆ ಆಶ್ರಯ ಕೇಂದ್ರವಾಗಿರುವ ಮೂಡಡ್ಕ ದರ್ಗಾ ಶರೀಫ್ ದಿನನಿತ್ಯ ಹಲವಾರು ಭಕ್ತಾದಿಗಳು ಆಗಮಿಸಿ ಪುಣ್ಯ ಪಡೆಯುತ್ತಿದ್ದರು.

ಐತಿಹಾಸಿಕವಾದ ಉರೂಸ್ ಕಾರ್ಯಕ್ರಮದ ಅಂಗವಾಗಿ ಮತ ಪ್ರವಚನ ಕಾರ್ಯಕ್ರಮ ದಿನಾಂಕ ಮಾರ್ಚ್ 9 ರಿಂದ ಪ್ರಾರಂಭಗೊಂಡಿದ್ದು 13 ಆದಿತ್ಯವಾರ ಸಂಜೆ ವಿಶೇಷ ಅನ್ನದಾನದ ಮೂಲಕ ಸಮಾರೂಪ ಗೊಂಡಿತು.

ಪ್ರಸ್ತುತ ಕಾರ್ಯಕ್ರಮದಲ್ಲಿ ಕೂರಿಕೂಝಿ ತಂಙಳ್, ಸೆಯ್ಯದ್ ಉಜಿರೆ ತಂಙಳ್, ಪಾಟ್ರಕೋಡಿ ತಂಙಳ್, ಸ್ವಲಾಹುದ್ದೀನ್ ಸಖಾಫಿ,
ಅಬ್ದುಲ್ ಖಾದರ್ ಮುಸ್ಲಿಯಾರ್ ಅಳಕೆಮಜಲ್, ಅಶ್ರಫ್ ಸಖಾಫಿ, ಉಸ್ಮಾನ್ ಸಹದಿ, ಸಮದ್ ಮಾಸ್ಟರ್, ಅಝೀಜ್ ನಈಮಿ, ಉಸ್ಮಾನ್ ಹಾಜಿ, ಸಲೀಮ್ ಹಾಗು ಇನ್ನಿತರ ಹಲವಾರು ಉಲಮಾ, ಉಮರಾ ನಾಯಕರು ಕಾರ್ಯಕ್ರಮದಲ್ಲಿ ಬಾಗವಹಿಸಿದರು.
ಭಕ್ತಿ ನಿರ್ಬಲವಾದ ಪ್ರಾರ್ಥನೆ ಮೂಲಕ ಅನ್ನದಾನದೊಂದಿಗೆ ಸಮಾಪ್ತಿಗೊಂಡಿತು.

ಉರೂಸ್ ಕಾರ್ಯಕ್ರಮ ಪ್ರಯುಕ್ತ SSF ಮತ್ತು SYS ಸರಳಿಕಟ್ಟೆ ಸೆಕ್ಟರ್ ವತಿಯಿಂದ ಬೃಹತ್ ಸಂದಲ್ ಸರಳಿಕಟ್ಟೆ ವ್ಯಾಪ್ತಿಯ ವಿವಿಧ ಕಡೆಗಳನ್ನು ಹಾದು ಸಂಜೆ ಮೂಡಡ್ಕ ತಲುಪಿತು, ಮೂಡಡ್ಕ ಸಂಸ್ಥೆಯ ನಾಯಕರು ಸಂದಲ್ ಮೆರವಣಿಗೆಯನ್ನು ಸ್ವಾಗತಿಸಿದರು.

By dtv

Leave a Reply

Your email address will not be published. Required fields are marked *

error: Content is protected !!