';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಕುಂತೂರು ಮಾರ್ ಇವನಿಯೋಸ್ ಶಿಕ್ಷಕ ಶಿಕ್ಷಣ ಸಂಸ್ಥೆಯ 4 ಸೆಮಿಸ್ಟರ್ ನ ವಿದ್ಯಾರ್ಥಿನಿ, ಯುವ ಕವಯತ್ರಿ ಸುಪ್ರೀತಾ ಚರಣ್ ಪಾಲಪ್ಪೆ ಕಡಬ (ಸೀತಾಲಕ್ಷ್ಮಿ) ರಚಿಸಿದ `ನನ್ನೊಳಗಿನ ನಾನು’ ಎಂಬ ಕವನ ಸಂಕಲನ ಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿತು.
ವಂ. ಬಿಷಪ್ ಡಾ. ಮಾರ್ ಮಕಾರಿಯೋಸ್‌ರವರ ಸಮ್ಮುಖದಲ್ಲಿ ಸಂಸ್ಥೆಯ ವ್ಯವಸ್ಥಾಪಕ ಡಾ. ಎಲ್ದೊ ಪುತ್ತನ್ ಕಂಡತ್ತಿಲ್, ಕಡಬ ಸೈಂಟ್ ಆನ್ಸ್ ಸಂಸ್ಥೆಗಳ ಸಂಚಾಲಕ ಫಾ. ಅರುಣ್ ವಿಲ್ಸನ್ ಲೋಬೋ ಅವರು ಪುಸ್ತಕ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಕವಿಯತ್ರಿ ಸುಪ್ರಿತಾ ಚರಣ್ ಪಾಲಪ್ಪೆ ಕಡಬ ಮಾತನಾಡಿ, ಈ ಕವನ ಸಂಕಲನ ಬಿಡುಗಡೆಗೊಂಡಿರುವುದು ನನಗೆ ಹೆಮ್ಮೆಯ ವಿಚಾರವಾಗಿದೆ. ಯುವ ಬರಹಗಾರರು ಪುಸ್ತಕವನ್ನು ಕೊಂಡು ಓದಿ ಪ್ರೋತ್ಸಾಹಿಸಿ, ಅದು ನಮಗೆ ಸ್ಫೂರ್ತಿಯಾಗಲಿದೆ ಎಂದ ಅವರು ಪುಸ್ತಕದ ಹಿಂದೆ ಪರಿಶ್ರಮಿಸಿದವರಿಗೆ ನಾನು ಅಭಾರಿಯಾಗಿರುತ್ತೇನೆಂದು ಹೇಳಿದರು.
ವೇದಿಕೆಯಲ್ಲಿ ಪ್ರಾಂಶುಪಾಲೆ ಉಷಾ ಎಂ.ಎಲ್ ಹಾಗೂ ಉಪನ್ಯಾಸಕ ವೃಂದ ಉಪಸ್ಥಿತರಿದ್ದರು.