ಕೋಝಿಕ್ಕೋಡ್:- ಕರ್ನಾಟಕ ಹೈಕೋರ್ಟ್ ಹೊರಡಿಸಿರುವ ಹಿಜಾಬ್ ತೀರ್ಪು ನಿಜಕ್ಕೂ ನಿರಾಶಾದಾಯಕವಾಗಿದ್ದು.
ಈ ತೀರ್ಪು ಸಂಪೂರ್ಣ ಇಸ್ಲಾಮಿ ವಿರುದ್ಧವಾಗಿದೆ ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಶೈಖ್ ಅಬೂಬಕ್ಕರ್ ಅಹ್ಮದ್ ಕೋಝಿಕ್ಕೋಡ್ ಕಾರ್ಯಕ್ರಮವೊಂದರಲ್ಲಿ ಹೇಳಿದರು.
ಕರ್ನಾಟಕ ಹೈಕೋರ್ಟ್ ತೀರ್ಪು ಒಪ್ಪುವಂತಹದಲ್ಲ, ಕೋರ್ಟ್ ನ ಮೇಲಿನ ಭರವಸೆಯನ್ನು ಈ ತೀರ್ಪು ಕುಗ್ಗಿಸಿದೆ.
ಹಿಜಾಬ್ ಇಸ್ಲಾಮಿನ ಅವಿಬಾಜ್ಯ ಅಂಗ ಅದನ್ನು ನಿರಾಕರಿಸಲು ಸಾದ್ಯವಿಲ್ಲ. ಹೈ ಕೋರ್ಟ್ ತೀರ್ಪನ್ನು ಮರು ಪರಿಶೀಲಿಸಬೇಕೆಂದು ಅವರು ಹೇಳಿದರು.
ಇದೀಗ ಹೈಕೋರ್ಟ್ ತೀರ್ಪು ಬೆನ್ನಲ್ಲೇ ಮುಸ್ಲಿಂ ವಿವಿಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ SSF ಈ ತೀರ್ಪು ಖೇದಕರ, ಕಾನೂನು ಹೋರಾಟ ಮುಂದುವರಿಸಲಿದ್ದೇವೆ ಎಂದು ಹೇಳಿದೆ.
ಹೈಕೋರ್ಟ್ ತೀರ್ಪು ಒಪ್ಪುವಂತಹದಲ್ಲ ಇದು ನ್ಯಾಯದ ಮರೀಚಿಕೆಯಾಗಿದೆ ಎಂದು SYS ಹೇಳಿದೆ.
ತೀರ್ಪು ವಿಚಾರದಲ್ಲಿ ಶಾಂತಿ ಕಾಪಾಡಲು ನಮ್ಮಲ್ಲಿ ಮನವಿ ಮಾಡಬೇಕಿಲ್ಲ ನಾವು ಎಂದಿಗೂ ಶಾಂತಿ ಪ್ರಿಯರು ಹೈಕೋರ್ಟ್ ತೀರ್ಪನ್ನು ಪರಿಶೀಲಿಸಲಿ ಎಂದು SKSSF ಹೇಳಿದೆ.
ಹಿಜಾಬ್ ಕುರಿತಾದ ಹೈಕೋರ್ಟ್ ತೀರ್ಪು ಪ್ರಶ್ನಾತೀತವಲ್ಲ ಎಂದು PFI ಹೇಳಿದೆ.
ಕಾನೂನು ಹೋರಾಟಕ್ಕೆ ಇಳಿಯಲಿದ್ದೇವೆ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಹೇಳಿದೆ.
ಇದೀಗ ಕರ್ನಾಟಕ ಹೈಕೋರ್ಟ್ ಹಿಜಾಬ್ ಬಗ್ಗೆ ನೀಡಿದ ತೀರ್ಪುನ ವಿರುದ್ಧ ವಿವಿಧ ಮುಸ್ಲಿಂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು ತೀರ್ಪು ಒಂದು ಧರ್ಮವನ್ನು ಮೆಚ್ಚಿಸುವಂತಹ ತೀರ್ಪು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.