dtvkannada

ಉಪ್ಪಿನಂಗಡಿ: ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ನೀಡಿರುವ ತೀರ್ಪು ವಿರೋಧಿಸಿ ರಾಜ್ಯಾದ್ಯಂತ ಅಮೀರೇ ಶರೀಅತ್ ಹೊರಡಿಸಿರುವ ಕರ್ನಾಟಕ ಬಂದ್ ಗೆ ಉಪ್ಪಿನಂಗಡಿಯಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದೆ.

ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ವಿಚಾರವಾಗಿ ಹೈಕೋರ್ಟ್ ನೀಡಿರುವ ತೀರ್ಪನ್ನು ವಿರೋಧಿಸಿ ಉಪ್ಪಿನಂಗಡಿಯ ವರ್ತಕರು ಮತ್ತು ರಿಕ್ಷಾ ಜೀಪು ಚಾಲಕರು ಸ್ವಯಂಪ್ರೇರಿತ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಕರ್ನಾಟಕ ಬಂದ್ ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ಗೆ ನಿರ್ಬಂಧ ವಿಧಿಸಿ ತೀರ್ಪು ಹಿನ್ನೆಲೆ ಹೈಕೋರ್ಟ್ ತೀರ್ಪು ಬೆನ್ನಲ್ಲೇ ರಾಜ್ಯಾದ್ಯಂತ ಇಂದು ಪ್ರತಿಭಟನೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ರಾಜ್ಯಾದ್ಯಂತ ವ್ಯಾಪಾರ ವಹಿವಾಟು ಬಂದ್ ಮಾಡಿ ಪ್ರತಿಭಟನೆ ಮಾಡಲಾಗುತ್ತಿದೆ. ಸ್ವಯಂಪ್ರೇರಿತವಾಗಿ ಅಂಗಡಿ ಮುಚ್ಚಿ ಮುಸ್ಲಿಮರಿಂದ ಪ್ರತಿಭಟನೆ ಮಾಡುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಖಾಕಿ ಕಟ್ಟೆಚ್ಚರ ವಹಿಸಲಾಗಿದೆ.

ಸೂಕ್ಷ್ಮ ಪ್ರದೇಶಗಳಾದ ಜೆ ಜೆ ನಗರ, ಬ್ಯಾಟರಾಯನಪುರ, ಶಿವಾಜಿನಗರ, ಕೆ ಜಿ ಹಳ್ಳಿ, ನಾಗವಾರ, ಟ್ಯಾನಿ ರಸ್ತೆ, ಜೆಸಿ ನಗರ ಸೇರಿ ಪ್ರಮುಖ ಏರಿಯಾಗಳಲ್ಲಿ ಬಂದೋಬಸ್ತ್ ಮಾಡಲಾಗಿದೆ. ಈಗಾಗಲೇ ನಗರದಲ್ಲಿ ಒಂದು ವಾರ 144 ಸೆಕ್ಷನ್ ಹೇರಿರುವ ಪೊಲೀಸ್ ಕಮೀಷನರ್ ಕಮಲ್ ಪಂತ್, 144 ಸೆಕ್ಷನ್ ಇರುವುದರಿಂದ ಮೆರವಣಿಗೆ, ಪ್ರತಿಭಟನೆ, ಜಾಥಾಗಳಿಗೆ ನಿಷೇಧಿಸಲಾಗಿದೆ.

ಪ್ರಮುಖ ಕಡೆಗಳಲ್ಲಿ ರೂಟ್ ಮಾರ್ಚ್ ಮಾಡಲು ಸೂಚನೆ ನೀಡಲಾಗಿದೆ. ನಗರದಲ್ಲಿ 25 ಕೆಎಸ್ ಆರ್ ಪಿ, 35 ಸಿಎಆರ್ ತುಕಡಿಗಳ ನಿಯೋಜನೆ ಮಾಡಲಾಗಿದೆ. ಅಯಾ ಠಾಣಾ ವ್ಯಾಪ್ತಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ.

ಶಿವಾಜಿನಗರದಲ್ಲಿ ಕೆಲ ಅಂಗಡಿ ಮುಗ್ಗಟ್ಟುಗಳು ತೆರೆದಿಲ್ಲ. ತರಕಾರಿ ಹೂ ಹಣ್ಣು , ಮಟನ್ ಅಂಗಡಿ ಬಂದ್ ಆಗಿವೆ. ಬೆಳಗಿನ ಜಾವ ಜನರಿಂದ ಕಿಕ್ಕಿರಿದು ತುಂಬಿರುತ್ತಿದ್ದ ಮಾರ್ಕೆಟ್ ಇಂದು ಬಂದ್ ಆಗಿವೆ. ಕೆಲ ಟೀ ಅಂಗಡಿ ಹೊರತು ಪಡಿಸಿ ಬಹತೇಕ ಅಂಗಡಿ ಬಂದ್. ಶಾಂತಿಯುತವಾಗಿ ಬಂದ್ ಆಚರಣೆ ಮಾಡುವಂತೆ ಮುಸ್ಲಿಂ ಸಂಘಟನೆ ಕರೆ ನೀಡಲಾಗಿದೆ.

ಕೋಲಾರದಲ್ಲಿ ಮುಸ್ಲಿಂ‌ ಸಂಘಟನೆಗಳಿಂದ ಬಂದ್ ಆಚರಣೆ ಮಾಡಲಾಗುತ್ತಿದ್ದು, ಅಂಗಡಿ ಮುಂಗಟ್ಟುಗಳನ್ನು‌ ಮುಚ್ಚಿ ಬಂದ್ಗೆ ಬೆಂಬಲ ಸೂಚಸಲಾಗಿದೆ. ನಗರದ ಕ್ಲಾಕ್ ಟವರ್, ರಹಮತ್ ನಗರ್, ಶಹಿನ್ ಶಾ ನಗರ ಸೇರಿದಂತೆ ಮುಸ್ಲಿಂ ಬಡಾವಣೆಗಳಲ್ಲಿ ಬಂದ್ ಆಚರಣೆ ಮಾಡಲಾಗುತ್ತಿದೆ. ಹಾಲು ಔಷದ ಹೊರತು ಪಡಿಸಿ ಯಾವುದೇ ರೀತಿ ವಹಿವಾಟು ಇಲ್ಲ. ಬಂದ್ ಹಿನ್ನೆಲೆ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮತ್ತು ನಿಷೇದಾಜ್ಞೆ ಜಾರಿಯಲ್ಲಿರುವ ಹಿನ್ನೆಲೆ ಯಾವುದೇ ಮೆರವಣಿಗೆ, ಪ್ರತಿಭಟನೆಗೆ ಅವಕಾಶ ನೀಡಿಲ್ಲ.

By dtv

Leave a Reply

Your email address will not be published. Required fields are marked *

error: Content is protected !!