ಸುಳ್ಯ: ಸಂಪಾಜೆ ಗಡಿಕಲ್ಲು ಬಳಿ ಸರಕಾರಿ ಬಸ್ಸೊಂದು ರಸ್ತೆಯಿಂದ ಕೆಳಗೆ ತೋಡಿಗೆ ಉರುಳಿ ಬಿದ್ದ ಘಟನೆ ಇದೀಗ ಸಂಭವಿಸಿದೆ.

ಧರ್ಮಸ್ಥಳದಿಂದ ಗುಂಡ್ಲುಪೇಟೆಗೆ ಹೋಗುವ ಬಸ್ ಸುಳ್ಯ ದಾಟಿ ಹೋಗುತ್ತಿದ್ದಾಗ ಸಂಪಾಜೆಯ ಗಡಿಕಲ್ಲು ಬಳಿ ತೋಡಿಗೆ ಉರುಳಿ ಬಿತ್ತು. ಬಸ್ಸಲ್ಲಿದ್ದ ಸುಮಾರು ೨೫ ಮಂದಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಗಾಯಾಳುಗಳನ್ನು ಸುಳ್ಯದ ಆಸ್ಪತ್ರೆಗೆ ತರಲಾಗುತ್ತಿದೆ.
ಅಪಘಾತಕ್ಕೆ ಬಸ್ಸಿನ ಟಯರ್ ಸ್ಪೋಟಗೊಂಡಿದ್ದೆ ಕಾರಣ ಎಂದು ತಿಳಿದು ಬಂದಿದೆ.