';
}
else
{
echo "Sorry! You are Blocked from seeing the Ads";
}
?>

';
}
else
{
echo "Sorry! You are Blocked from seeing the Ads";
}
?>
ತೆಲಂಗಾಣ: ರಸ್ತೆ ಅಪಘಾತವೊಂದನ್ನು ತನ್ನ ಕಣ್ಣಾರೆ ಕಂಡು ಹೃದಯಾಘಾತದಿಂದ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ತೆಲಂಗಾಣದ ವಿಕಾರಾಬಾದ್ನಲ್ಲಿ ನಡೆದಿದೆ.

ವಿಕಾರಾಬಾದ್ನ ಬಶೀರಾಬಾದ್ನ ವಲಯದ ನಿವಾಸಿಯಾದ ಸುದರ್ಶನ್ ಗೌಡ್ ಎಂಬುವವರ ಪುತ್ರ ಯಶ್ವಂತ್ ಗೌಡ್ (16) ಮೃತಪಟ್ಟ ವಿದ್ಯಾರ್ಥಿ.
ಯಶ್ವಂತ್ ಗೌಡ್ ವಿಕಾರಾಬಾದ್ನ ಖಾಸಗಿ ಕಾಲೇಜೊಂದರಲ್ಲಿ ಮೊದಲ ವರ್ಷದ ಇಂಟರ್ಮೀಡಿಯೇಟ್ ಓದುತ್ತಿದ್ದ ಎಂದು ತಿಳಿದುಬಂದಿದೆ.
ನಿನ್ನೆ ಬಶೀರಾಬಾದ್ನಿಂದ ಜೀವಾಂಗಿ ಎಂಬ ಗ್ರಾಮದಿಂದ ಬೈಕ್ನಲ್ಲಿ ಬರುತ್ತಿದ್ದ ವ್ಯಕ್ತಿಯೋರ್ವ ಬೈಕ್ ಸ್ಕಿಡ್ ಆಗಿ ಉರುಳಿಬಿದ್ದಿದ್ದಾನೆ.
ಇದನ್ನು ನೋಡಿದ ಯಶ್ವಂತ್ ಗೌಡ ಆಘಾತಕ್ಕೆ ಒಳಗಾಗಿ ಸ್ಥಳದಲ್ಲಿಯೇ ಮೂರ್ಛೆ ತಪ್ಪಿ ಬಿದ್ದಿದ್ದಾನೆ.
ಸ್ಥಳೀಯರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ವಿದ್ಯಾರ್ಥಿ ಯಶ್ವಂತ್ ಮೃತಪಟ್ಟಿದ್ದಾನೆ.
