ಬೆಂಗಳೂರು: ನಾಳೆಯಿಂದ ರಾಜ್ಯಾಧ್ಯಾಂತ SSLC ಪರೀಕ್ಷೆ ಪ್ರಾರಂಭಗೊಳ್ಳಲಿದ್ದು ಇದೀಗ ಮುಸ್ಲಿಂ ವಿದ್ಯಾರ್ಥಿನಿಗಳಿಗೆ ಹಿಜಾಬ್ ಸಂಕ್ಷಷ್ಟ ಎದುರಾಗಿದೆ.
ಹೈಕೋರ್ಟ್ ಆದೇಶದಂತೆ ಹಿಜಾಬ್ ಧರಿಸಿ ವಿದ್ಯಾರ್ಥಿಗಳು ತರಗತಿ ಪ್ರವೇಶಿಸುವಂತಿಲ್ಲ ಎಂಬ ಆದೇಶವನ್ನು ಎತ್ತಿ ಹಿಡಿದು ನಾಳೆಯಿಂದ ನಡೆಯುವ SSLC ಪರೀಕ್ಷೆಗೆ ಹಿಜಾಬ್ ಧರಿಸಿ ಬಂದರೆ ಅವಕಾಶವಿಲ್ಲ ಎಂದು ಇದೀಗಾಗಲೇ ಆದೇಶ ಹೊರಡಿಸಿದೆ.
ಮಕ್ಕಳ ಶಿಕ್ಷಣದ ವಿಚಾರದಲ್ಲಿ ಹಟಕ್ಕೆ ಬಿದ್ದ ಸರ್ಕಾರ ಇದೀಗ ಹಿಜಾಬ್ ದರಿಸದೆ ಪರೀಕ್ಷೆಗೆ ಹಾಜರಾಗುವುದಿಲ್ಲ ಎಂದು ಹಲವಾರು ವಿದ್ಯಾರ್ಥಿಗಳು ಪಣ ತೊಟ್ಟಿದ್ದಾರೆ.
ಇದೀಗ ಸುನ್ನೀ ಉಲಮಾಗಳು ಈ ಬಗ್ಗೆ ವಿದ್ಯಾರ್ಥಿಗಳ ಮನವೊಲಿಸುತ್ತಿದ್ದು ಪರೀಕ್ಷೆಯನ್ನು ಎದುರಿಸಿ ಶಿಕ್ಷಣದಿಂದ ವಂಚಿತರಾಗಬೇಡಿ ಎಂದು ಕರೆ ಕೊಟ್ಟಿದ್ದಾರೆ.
ಸರ್ಕಾರದ ಜೊತೆ ಸಂಘರ್ಷಕ್ಕಿಳಿಯಬೇಡಿ, ನಾವು ಸುಪ್ರೀಂಕೋರ್ಟ್ ಕದ ತಟ್ಟಲಿದ್ದೇವೆ ಅಲ್ಲಿ ನ್ಯಾಯ ಸಿಗುವ ಭರವಸೆಯಿದೆ.
ಅಲ್ಲಿಯವರೆಗೆ ಸಂಯಮ ಕಾಪಾಡಿ ಎಂದು ಸುನ್ನೀ ಉಲಮಾ ಒಕ್ಕೂಟದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಂಡಿಯನ್ ಗ್ರಾಂಡ್ ಮುಫ್ತಿ ನಿನ್ನೆ ಕರ್ನಾಟಕದಲ್ಲಿ ಕಾರ್ಯಕ್ರಮವೊಂದರಲ್ಲಿ ಹೇಳಿದರು.
ನಮ್ಮ ಸಮುದಾಯ ಶಿಕ್ಷಣದಿಂದ ವಂಚಿತರಾಗಬಾರದು ನಾಳೆಯಿಂದ ನಡೆಯುವ ಪರೀಕ್ಷೆಯನ್ನು ಎದುರಿಸಿ ವಿಜಯ ನಮ್ಮ ಪಾಲಿಗೆ ಸಿಗಲಿದೆ.
ವಿದ್ಯಾರ್ಥಿಗಳು ಸಹಕರಿಸಿ ಎಂದು ಉಡುಪಿ ಖಾಝಿ ಝೈನುಲ್ ಉಲಮಾ ಹೇಳಿದ್ದಾರೆ.