ಮಾಣಿ : ಬದ್ರಿಯಾ ಜುಮಾ ಮಸೀದಿ ಸೂರಿಕುಮೇರು ಇದರ ಸ್ವಲಾತ್ ವಾರ್ಷಿಕ ಮತ್ತು ಎರಡು ದಿನಗಳ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಿತು.
ಮೊದಲ ದಿನದ ಮುಖ್ಯ ಪ್ರಭಾಷಣ ಮಾಡಿದ ಅಬ್ದುಲ್ ಹಮೀದ್ ಫೈಝಿ ಕಿಲ್ಲೂರು,ಅಲ್ಲಾಹನು ಗೌರವಿಸಲು ಸೂಚಿಸಿದ ಎಲ್ಲಾ ವ್ಯಕ್ತಿ ಮತ್ತು ವಸ್ತುಗಳನ್ನು ಗೌರವಿಸದೆ ಅಹಂಕಾರಿಯಾಗಿ ಜೀವಿಸಬೇಡಿ ಇಬ್ಲೀಸನಿಗೆ ಶಪಿಸಲ್ಪಟ್ಟವ ಎಂಬ ಗತಿ ಬರಲು ಅದೇ ಕಾರಣವಾಗಿದೆ.
ಆದ್ದುದ್ದರಿಂದ ಬಹಳ ಎಚ್ಚರಿಕೆಯಿಂದ ಜೀವಿಸಿರಿ ಎಂದು ಅವರು ಹೇಳಿದರು.ಎರಡನೇ ದಿನದ ಮುಖ್ಯ ಪ್ರಭಾಷಣ ಮಾಡಿದ ಅಬೂಬಕರ್ ಸಿದ್ದೀಕ್ ಅಲ್ ಜಲಾಲಿ,ಕೌಟುಂಬಿಕ ಕಲಹಗಳು ಹೆಚ್ಚಲು ಪರಸ್ಪರರ ಹೊಂದಾಣಿಕೆ ಮತ್ತು ತಿಳುವಳಿಕೆಯ ಕೊರತೆಯೇ ಕಾರಣ, ಪತಿ ಪತ್ನಿ ಮಕ್ಕಳು ಮಾತಾಪಿತರೊಂದಿಗಿನ ಕರ್ತವ್ಯ ಮತ್ತು ಬಾಧ್ಯತೆಗಳನ್ನು ಪರಸ್ಪರರು ಅರಿತು ಬಾಳುವುದೇ ಯಶಸ್ಸಿನ ಮೂಲ ಎಂದು ಅವರು ಹೇಳಿದರು.
ಸಯ್ಯಿದ್ ಶರಫುದ್ದೀನ್ ಅಲ್ ಹಾದಿ ತಂಙಳ್ ಸಾಲ್ಮರ ಸ್ವಲಾತ್ ವಾರ್ಷಿಕದ ನೇತೃತ್ವ ವಹಿಸಿ ದುಆ ಮಾಡಿದರು,ಮುಅಲ್ಲಿಂ ಅಬ್ದುಲ್ ಗಫೂರ್ ಮುಸ್ಲಿಯಾರ್ ಸ್ವಾಗತಿಸಿದರು,ಸದರ್ ಅಬ್ದುಲ್ ಸಲಾಂ ಹನೀಫಿ ಕಬಕ ಉದ್ಘಾಟಿಸಿದರು,ಖತೀಬ್ ಇಸ್ಮಾಯಿಲ್ ಆಸಿಫ್ ಹನೀಫಿ ಕಾರ್ಯಕ್ರಮವನ್ನು ನಿರೂಪಿಸಿದರು,ವೇದಿಕೆಯಲ್ಲಿ ಅಧ್ಯಕ್ಷ ಮೂಸಾ ಕರೀಂ ಮಾಣಿ,ಕಾರ್ಯದರ್ಶಿ ಅಮೀರುದ್ದೀನ್ ಸೂರಿಕುಮೇರು ಉಪಸ್ಥಿತರಿದ್ದರು.ಕಾರ್ಯಕ್ರಮದ ಯಶಸ್ಸಿನಲ್ಲಿ ಕಮಿಟಿ ಸದಸ್ಯರು ಮತ್ತು ಜಮಾಅತಿಗರು ಕೈ ಜೋಡಿಸಿದರು.