ಕುಂಬ್ರ: ಅಲ್ಪ ದಿನಗಳ ಅನಾರೋಗ್ಯದಿಂದ ಕಳೆದ ಮಾರ್ಚ್ 25 ರಂದು ನಿಧನರಾದ ಹಿರಿಯ ವರ್ತಕ ಸುಂದರ ಪೂಜಾರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ವರ್ತಕ ಸಂಘ (ರಿ) ಕುಂಬ್ರ ಇದರ ವತಿಯಿಂದ ಸೋಮವಾರ ಸಂಜೆ ನಡೆಸಲಾಯಿತು.
ವರ್ತಕರ ಸಂಘದ ಹಿರಿಯ ಸದಸ್ಯರಾಗಿದ್ದುಕೊಂಡು, ಹಲವಾರು ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿ, ಎಲ್ಲರಿಗೂ ಮಾರ್ಗದರ್ಶಕರಾಗಿದ್ದ ಸುಂದರ ಪೂಜಾರಿ(೭೦) ರವರು ಅಲ್ಪಕಾಲದ ಅಸೌಖ್ಯದಿಂದ ಕೆಲ ದಿನಗಳ ಹಿಂದೆ ನಿಧನ ಹೊಂದಿದ್ದರು.
ಮೃತರ ಗೌರವಾರ್ಥವಾಗಿ ವರ್ತಕ ಸಂಘ ಕುಂಬ್ರ ಇಂದು ಸಂಜೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಿದ್ದು ಕಾರ್ಯಕ್ರಮದಲ್ಲಿ ಮೃತರಿಗೆ ಒಂದು ನಿಮಿಷಗಳ ಕಾಲ ಮೌನ ಪ್ರಾರ್ಥನೆ ಸಲ್ಲಿಸಿ ಮೃತರ ಫೋಟೋ ಇಟ್ಟು ಸೇರಿದ ವರ್ತಕರೆಲ್ಲರೂ ಪುಷ್ಪಾರ್ಚನೆ ಸಲ್ಲಿಸಿದರು.
ಕುಂಬ್ರ ವರ್ತಕರ ಸಂಘದ ಸ್ಥಾಪಕಧ್ಯಕ್ಷರಾದ ಶ್ಯಾಂ ಸಂದರ್ ರೈ ಕೊಪ್ಪಳ ರವರು ಮಾತಾಡುತ್ತಾ ಮೃತರ ಜೊತೆಗಿನ ಅನುಭವಗಳನ್ನು ಹಂಚಿ, ಅವರ ಸಾಮಾಜಿಕ ಸೇವೆಗಳನ್ನು ಮೆಲುಕು ಹಾಕುತ್ತಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.
ನಂತರ ಸಂಘದ ಅಧ್ಯಕ್ಷರಾದ ಮಾಧವ ರೈ ಕುಂಬ್ರ ಮಾತಾಡುತ್ತಾ ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿ, ಮಾಜಿ ಅಧ್ಯಕ್ಷರಾದ ನಾರಾಯಣ ಪೂಜಾರಿ ಮೃತರ ಬಗ್ಗೆ ಒಂದಷ್ಟು ನೆನಪುಗಳನ್ನು ಹಂಚಿಕೊಂಡರು.
ಕಾರ್ಯಕ್ರಮವನ್ನು ವರ್ತಕ ಸಂಘದ ಪ್ರ.ಕಾರ್ಯದರ್ಶಿ ಅಝರ್ ಷಾ ಕುಂಬ್ರ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಮೃತರ ಮಕ್ಕಳಾದ ರವಿ ಮತ್ತು ವಿಜಯ್ ಸೇರಿಕೊಂಡಿದ್ದರು.
ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ವರ್ತಕರ ಸಂಘ(ರಿ) ಕುಂಬ್ರ ಇದರ ಕೋಶಾಧಿಕಾರಿ ಸಂಶುದ್ದೀನ್ ಎ.ಆರ್, ಮಾಜಿ ಅಧ್ಯಕ್ಷರಾದ ಮೆಲ್ವೀನ್ ಮೊಂತೆರೋ, ಪುರಂದರ ರೈ ಕೊರಿಕ್ಕಾರು, ಪದ್ಮನಾಭ ಆಚಾರ್ಯ, ಜಯರಾಮ್ ಆಚಾರ್ಯ, ಭವ್ಯ ರೈ ಬಬ್ಲಿ, ಉದಯ ಆಚಾರ್ಯ, ಸಂತೋಷ್ ಟೈಲರ್, ಕಿಶೋರ್ ಕ್ಲಿಕ್ ಸ್ಟುಡಿಯೋ,ಜಯಶ್ರೀ ಕುಸಮೋದರ,ನಿಶಾ ಭಾಗವಹಿಸಿದ್ದರು.