dtvkannada

ಉಪ್ಪಿನಂಗಡಿ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ S,S,F ಕಕ್ಕೆಪದವು ಯುನಿಟ್ ವತಿಯಿಂದ ಅರ್ಹ ಕುಟುಂಬಗಳಿಗೆ ರಮಳಾನ್ ಕಿಟ್ ವಿತರಣೆ ಕಾರ್ಯಕ್ರಮ BJM ಮಸ್ಜಿದ್ ವಠಾರ ಕಕ್ಯಪದವುನಲ್ಲಿ ಇಂದು ಮಧ್ಯಾಹ್ನ ನಡೆಯಿತು.

ಅಬ್ದುಲ್ ಕರೀಂ ಕುಂಞಳಿಕೆ ಅಧ್ಯಕ್ಷತೆ ವಹಿಸಿದರು.
B,J,M ಮಸ್ಜಿದ್ ಖತೀಬರಾದ ಅಬೂಬಕ್ಕರ್ ಸಅದಿ ದುವಾಃ ನೆರವೇರಿಸಿದರು. S,S,F ಕಕ್ಯಪದವು ಯನಿಟ್ ಪ್ರ. ಕಾರ್ಯದರ್ಶಿ ಸ್ವಾಧಿಕ್ ಸಖಾಫಿ ಪೇರಳಗುಳಿ ಪ್ರಾಸ್ತಾವಿಕ ಮಾತುಗಳನ್ನಾಡಿ SSF ನಡೆಸುತ್ತಿರುವ ಇಂತಹ ಕಾರ್ಯಗಳಲ್ಲಿ ಎಲ್ಲರೂ ಜೊತೆಯಾಗಬೇಕು, ಬಡವರ ಏಳಿಗೆಗೆ ಶ್ರಮ ಪಡುತ್ತಿರುವ ಈ ಕಾರ್ಯಕರ್ತರ ಶ್ರಮ ಮಹತ್ವದ್ದೇ ಆಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಬದ್ರಿಯ ಜುಮ್ಮಾ ಮಸೀದಿ ಅಧ್ಯಕ್ಷರಾದ ಅಬ್ದುರ್ರಹ್ಮಾನ್ ಕಕ್ಕೆಪದವು, SYS ಅಧ್ಯಕ್ಷರಾದ ತಸ್ಲೀಂ ಸಖಾಫಿ ಗಂಪದಡ್ಡ, ಜಮಾಅತ್ ಉಪಾಧ್ಯಕ್ಷರಾದ ಇಸ್ಮಾಯಿಲ್ ಕಕ್ಕೆಪದವು ಹಾಗೂ ಇಸ್ಹಾಕ್ ಗಂಪದಡ್ಡ, ಜಮಅತ್ ಹಿರಿಯ ವ್ಯಕ್ತಿಗಳಾದ ಇಸುಬ್ ಕುಂಞಳಿಕೆ, ಹಮೀದ್ ಡ್ರೈವರ್,‌ ಯುನಿಟ್ ನಾಯಕರಾದ ಮುಹಿನುದ್ದೀನ್ M.G, ಅಝೀಝ್ ಕುಂಞಳಿಕೆ, ಕ್ಯಾಂಪಸ್ ಕಾರ್ಯದರ್ಶಿ ಅಸ್ಪಕ್ ಕರ್ಲ, ಜಮಾಲ್ ಗುಡ್ಡೆಮನೆ, ಉಪ್ಪಿನಂಗಡಿ ಡಿವಿಷನ್ ಮೀಡಿಯಾ ಕಾರ್ಯದರ್ಶಿ ಶಿಹಾಬುದ್ದೀನ್ ಕಕ್ಕೆಪದವು ಮತ್ತಿತರು ಉಪಸ್ಥಿತರಿದ್ದರು.

By dtv

Leave a Reply

Your email address will not be published. Required fields are marked *

error: Content is protected !!