dtvkannada

ಪುತ್ತೂರು: ಸಾಮಾಜಿಕ ಜಾಲತಾಣದ ಮೂಲಕ ಸಮಾಜ ಸೇವೆ ಮಾಡುತ್ತಿರುವ ಎಮರ್ಜೆನ್ಸಿ ಹೆಲ್ಪಿಂಗ್ ಗ್ರೂಪ್ ಬೀಟಿಗೆ ಇದರ ವತಿಯಿಂದ ನಾಡಿನ ಅರ್ಹ ಬಡ ಕುಟುಂಬಕ್ಕೆ ರಂಝಾನ್ ಕಿಟ್ ವಿತರಣೆಯ ಕಾರ್ಯಕ್ರಮ ನೂರುದ್ದೀನ್ ಹಾಜಿ ಇವರ ಮನೆಯಲ್ಲಿ ಜಮಾಅತ್ ಕಮಿಟಿಯ ಅಧ್ಯಕ್ಷರಾದ ಸುಲೈಮಾನ್ ಬೀಟಿಗೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಬೀಟಿಗೆ ಜುಮಾ ಮಸೀದಿಯ ಖತೀಬರಾದ ದಾವೂದ್ ಇಸ್ಮಾಯಿಲ್ ಪೈಝಿ ದುವಾಕ್ಕೆ ನೇತೃತ್ವ ನೀಡಿ, ಎಮಾರ್ಜೆನ್ಸಿ ಹೆಲ್ಪಿಂಗ್ ನ ಕಾರ್ಯ ಚಟುವಟಿಕೆ ಬಗ್ಗೆ ಶ್ಲಾಘಿಸಿದರು. ಇನ್ನೂ ಕೂಡ ಬಡವರ ಕಣ್ಣೀರು ಒರೆಸುವ ಕೆಲಸವನ್ನು ಮಾಡಲಿಕ್ಕೆ ಅಲ್ಲಾಹು ಶಕ್ತಿ ನೀಡಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಬೀಟಿಗೆ ಜಮಾಅತ್ ಕಮಿಟಿಯ ಕಾರ್ಯದರ್ಶಿ ಹಮೀದ್ ಕೆದಿಲ, ಜೊತೆ ಕಾರ್ಯದರ್ಶಿ ಕರೀಂ ಬೀಟಿಗೆ, ಜಮಾಅತ್ ಕಮಿಟಿಯ ಉಪಾಧ್ಯಕ್ಷರಾದ ಅಬ್ಬಾಸ್ ಬಡಕ್ಕಿಲ, ತಾಜುಲ್ ಉಲಮ ಜುಮಾ ಮಸೀದಿ ಬಡಕ್ಕಿಲ ಇದರ ಸದಸ್ಯರಾದ ಅಬ್ದುಲ ಮುದ್ರಾಜೆ, ಜಮಾಅತ್ ಕಮಿಟಿ ಬೀಟಿಗೆ ಇದರ ಮಾಜಿ ಅಧ್ಯಕ್ಷರಾದ ಇಬ್ರಾಹಿಂ ಬಡಕ್ಕಿಲ, SkSSF ಬೀಟಿಗೆ ಶಾಖೆ ಇದರ ಅಧ್ಯಕ್ಷರಾದ ಇಸ್ಮಾಯಿಲ್ ಬಡಕ್ಕಿಲ, ಎಮರ್ಜನ್ಸಿ ಹೆಲ್ಪಿಂಗ್ ಗ್ರೂಪ್ ಇದರ ಹಣಕಾಸು ಉಸ್ತುವಾರಿ ಶರೀಫ್ ಬೀಟಿಗೆ, ಕುತುಬಿಯತ್ ಕಮಿಟಿ ಬೀಟಿಗೆ ಇದರ ಕೋಶಾಧಿಕಾರಿ ಶಫೀಕ್ ಯರ್ಮುಂಜ, SDPI ಬೀಟಿಗೆ ವಾರ್ಡಿನ ಅಧ್ಯಕ್ಷರಾದ ಶಂಸುದ್ದೀನ್ ಬೀಟಿಗೆ, KCF ದುಬೈ ಘಟಕದ ಇದರ ಸದಸ್ಯರಾದ ನಾಸೀರ್ ಮುದ್ರಾಜೆ, PFI ಬೀಟಿಗೆ ಘಟಕದ ಅಧ್ಯಕ್ಷರಾದ ಕರೀಂ ಬೀಟಿಗೆ, ಎಮರ್ಜನ್ಸಿ ಹೆಲ್ಪಿಂಗ್ ಗ್ರೂಪ್ ಬೀಟಿಗೆ ಇದರ ಸದಸ್ಯರಾದ ಅಬೂಬಕ್ಕರ್ ಕೆದಿಲ, ನೂರುದ್ದೀನ್ ಹಾಜಿ ಬೀಟಿಗೆ, ಹಮೀದ್ ಮುದ್ರಾಜೆ, ಹಾರೀಸ್ ಯಮಾನಿ ಬೀಟಿಗೆ, ಆರೀಸ್ ಬೀಟಿಗೆ ಸೌದಿ, ಶಾಹೀದ್ ಬೀಟಿಗೆ, ಶಾಫಿ ಬೀಟಿಗೆ, ಜಮ್ಮಿಲ್ ಬೀಟಿಗೆ, ಉವೈಸ್ ಮುದ್ರಾಜೆ ಹಾಗೂ ಇನ್ನಿತರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಗ್ರೂಪ್ ಅಡ್ಮಿನ್ ಸಿದ್ಧೀಕ್ ಬೀಟಿಗೆ ಎಮರ್ಜನ್ಸಿ ಹೆಲ್ಪಿಂಗ್ ಗ್ರೂಪ್ ನ ಕಾರ್ಯ ಚಟುವಟಿಕೆಯ ಬಗ್ಗೆ ವಿವರಿಸಿ ಕಾರ್ಯಕ್ರಮಕ್ಕೆ ಬಂದ ಎಲ್ಲರನ್ನು ಮತ್ತು ಸಹಾಯ ಮಾಡಿದವನ್ನು ಸ್ವಾಗತಿಸಿ ವಂದಿಸಿದರು.

By dtv

Leave a Reply

Your email address will not be published. Required fields are marked *

error: Content is protected !!