ಮಂಗಳೂರು:ಮನುಷ್ಯನ ಮುಂದೆ, ಹಣ,ಚಿನ್ನ,ಬೆಳ್ಳಿ,ವಜ್ರ, ವೈಡೂರ್ಯ ಹಾಗೂ ಪಕ್ಕದಲ್ಲಿ ರಕ್ತ ಇಟ್ಟಲ್ಲಿ ಮೊದಲ ಆಯ್ಕೆ ರಕ್ತವೇ ಹೊರತು ಇತರ ವಸ್ತು ಆತನ ಗಮನಕ್ಕೆ ಬಾರದು ಆ ನಿಟ್ಟಿನಲ್ಲಿ ರಕ್ತದ ಮಹತ್ವವನ್ನು ಅರಿತಲ್ಲಿ ಬದುಕಿನುದ್ದಕ್ಕೂ ಸಾರ್ಥಕತೆ ಕಾಣಲು ಸಾಧ್ಯ ಎಂದು ಫಿಝಾ ಮಾಲ್ ಇದರ ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾದ ಸುನಿಲ್ ಅಭಿಪ್ರಾಯಪಟ್ಟರು.
ಅವರು ಇಂದು ಫಾರಂ ಫಿಝಾ ಮಾಲ್ ಮಂಗಳೂರು ಹಾಗೂ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಇದರ ಜಂಟಿ ಆಶ್ರಯದಲ್ಲಿ ಕೆ.ಎಂ.ಸಿ. ಆಸ್ಪತ್ರೆ ಮಂಗಳೂರು ಇವರ ಸಹಯೋಗದಲ್ಲಿ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಸಂಸ್ಥೆಯ 133 ನೇ ಬ್ರಹತ್ ಸಾರ್ವಜನಿಕ ರಕ್ತದಾನ ಶಿಬಿರ ಹಾಗೂ ವೈದ್ಯಕೀಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಮಾರಂಭದ ಅದ್ಯಕ್ಷತೆ ವಹಿಸಿದ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಇದರ ಅದ್ಯಕ್ಷರಾದ ನಝೀರ್ ಹುಸೈನ್ ಮಾತಾಡಿ ಪ್ರತಿಯೊಬ್ಬರ ದೇಹದಲ್ಲಿರುವ ರಕ್ತದ ಬಣ್ಣವನ್ನು ಬದಲಿಸಲು ಸಾಧ್ಯವಿಲ್ಲ ಇದುಸತ್ಯ ಜಾತಿಗಳ ಮದ್ಯೆ ಕಂದಕ ನಿರ್ಮಿಸದಿರಿ ಎಂದು ಹೇಳಿದರು.
ವೇದಿಕೆಯಲ್ಲಿ ಇಂಜಿನಿಯರ್ ತಿಲಕ್, ಫಿಝಾ ಮಾಲ್ ವ್ಯವಸ್ಥಾಪಕರಾರ ಅಶ್ವಿತ್,ಸ್ಪೇಷಾಲಿಟಿ ಮ್ಯಾನೇಜರ್ ನಿಶಾ ಅಂಚನ್,ಕೆ.ಎಂ.ಸಿ.ವೈದ್ಯರಾದ ಶ್ರವಣ್,ದೀಕ್ಷಾ,ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ಕಾರ್ಯನಿರ್ವಾಹಕರಾದ ಸಿರಾಜ್ ಉಳಾಯಿಬೆಟ್ಟು,ಬಾತಿಷ್ ತೆಕ್ಕಾರು,ನಿಹಾನ್ ಉಳ್ಳಾಲ, ಮಹಮ್ಮದ್ ಫರ್ವಿಝ್ ಉಪ್ಪಳ ಉಪಸ್ಥಿತರಿದ್ದರು.
ರಕ್ತ ಪೂರೈಕೆ ವಿಭಾಗದ ಮುಖ್ಯಸ್ಥ ಮುಸ್ತಾಫ ಕೆ.ಸಿ.ರೋಡ್ ಸ್ವಾಗತಿಸಿದರು. ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ಮಾಧ್ಯಮ ವಿಭಾಗದ ಮುಖ್ಯಸ್ಥ ಅಬ್ದುಲ್ ಹಮೀದ್ ಗೋಳ್ತಮಜಲ್ ವಂದಿಸಿದರು.