dtvkannada

'; } else { echo "Sorry! You are Blocked from seeing the Ads"; } ?>

ಮಂಗಳೂರು: ವಿದ್ಯುತ್ ದರ ವಿಪರೀತ ಏರಿಕೆ ಮಾಡಿದ್ದು ಮಧ್ಯಮ ವರ್ಗದ ಜನರ ಕೆಂಗಣ್ಣಿಗೆ ಗುರಿಯಾಗಿದ್ದ ರಾಜ್ಯ ಸರಕಾರದ ವಿರುದ್ದ ಹಾಗೂ ಏರಿಕೆ ಮಾಡಿದ ದರ ವಾಪಸಾತಿಗೆ ಒತ್ತಾಯಿಸಿ ಡಿವೈಎಫ್ಐ, ಎಸ್ಎಫ್ಐ, ಜೆಎಂಎಸ್ ದ.ಕ ಜಿಲ್ಲಾ ಸಮಿತಿಯು ಮೆಸ್ಕಾಂ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ಪೆಟ್ರೋಲ್ , ಡೀಸಲ್, ಅಡುಗೆ ಅನಿಲ ಸೇರಿದಂತೆ ಪ್ರತಿಯೊಂದು ದಿನಬಳಕೆಯ ವಸ್ತುಗಳ ವಿಪರೀತ ಬೆಲೆ ಏರಿಕೆಗಳಿಂದ ತತ್ತರಿಸಿ ಹೋಗಿರುವ ರಾಜ್ಯದ ಜನರ ಮೇಲೆ ಈಗ ವಿದ್ಯುತ್ ದರವನ್ನು ಕೂಡ
ಏರಿಕೆ ಮಾಡುವ ಮೂಲಕ ರಾಜ್ಯದ ಬಿಜೆಪಿ ಸರಕಾರವು ಜನರ ಗಾಯದ ಮೇಲೆ ಬರೆ ಎಳೆದು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ ಎಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆರೋಪಿಸಿದೆ.

'; } else { echo "Sorry! You are Blocked from seeing the Ads"; } ?>

ಗೃಹ ಬಳಕೆಯ ವಿದ್ಯುತ್ ದರದಲ್ಲಿ ಪ್ರತಿ ಯೂನಿಟಿಗೆ 20ರಿಂದ 30ಪೈಸೆ ಹಾಗೂ ವಾಣಿಜ್ಯ ಬಳಕೆಯ ವಿದ್ಯುತ್ ದರಗಳ ಮೇಲೆ ಪ್ರತಿ ಯುನಿಟಿಗೆ 15ರಿಂದ 25ಪೈಸೆ ಯಷ್ಟು ಏರಿಕೆ ಮಾಡಿ ಏಪ್ರಿಲ್ ಒಂದರಿಂದ ಜಾರಿಗೊಳಿಸಲು ಮುಂದಾಗಿದೆ.

ಈಗಾಗಲೆ ಕಳೆದೆರಡು ವರುಷಗಳಿಂದ ಜನರ ಯಾವುದೇ ವಿರೋಧವನ್ನು ಪರಿಗಣನೆಗೆ ತೆಗೆದುಕೊಳ್ಳದೆ ನಿರಂತರ ವಿದ್ಯುತ್ ದರವನ್ನು ಏರಿಕೆಗೊಳಿಸಿದೆ.

ಲಾಕ್ಡೌನ್ ನಂತರ ಜನ ತಮ್ಮ ಆದಾಯದ ಮೂಲಗಳೆಲ್ಲವನ್ನು ಕಳೆದುಕೊಂಡಿದ್ದಾರೆ. ಉದ್ಯೋಗ ಇಲ್ಲದೆ ಮತ್ತು ಇರುವ ಉದ್ಯೋಗಕ್ಕೆ ಸರಿಯಾದ ವೇತನವನ್ನು ಪಡೆಯಲಾಗದೆ ಸಂಕಷ್ಟದಲ್ಲಿದ್ದಾರೆ.

ಪೆಟ್ರೋಲ್ ಡೀಸೆಲ್ ನಿಂದ ಹಿಡಿದು ಅಡುಗೆ ಅನಿಲ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಗಳಿಂದ ಕಂಗೆಟ್ಟಿರುವ ಜನಸಾಮಾನ್ಯರು ಇದೀಗ ವಿದ್ಯುತ್ ದರ ಏರಿಕೆಯಿಂದ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದ್ದಾರೆ.

'; } else { echo "Sorry! You are Blocked from seeing the Ads"; } ?>

ಈ ರೀತಿಯ ವಿಪರೀತ ಬೆಲೆ ಏರಿಕೆಯನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಈ ಹಿನ್ನಲೆಯಲ್ಲಿ ವಿದ್ಯುತ್ ದರ ವಿಪರೀತ ಏರಿಕೆ ಮಾಡಿದ ರಾಜ್ಯ ಬಿಜೆಪಿ ಸರಕಾರದ ಜನವಿರೋಧಿ ಧೋರಣೆಯನ್ನು ಖಂಡಿಸಿ ಹಾಗು ಏರಿಕೆ ಮಾಡಿದ ದರವನ್ನು ಕೂಡಲೇ ವಾಪಸ್ಸು ಪಡೆಯಲು ಒತ್ತಾಯಿಸಿ

ಏ. 11 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಬಿಜೈ ಬಳಿ ಇರುವ ಮೆಸ್ಕಾಂ ಕೇಂದ್ರ ಕಚೇರಿಗೆ ಡಿವೈಎಫ್ಐ, ಎಸ್ಎಫ್ಐ ಮತ್ತು ಜನವಾದಿ ಮಹಿಳಾ ಸಂಘಟನೆ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ ಎಂದು ಡಿವೈಎಫ್ಐ ದ.ಕ ಜಿಲ್ಲಾಧ್ಯಕ್ಷರಾದ ಬಿ. ಕೆ ಇಮ್ತಿಯಾಜ್ ಮತ್ತು ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!