ಬೆಂಗಳೂರು- ಮೈಸೂರು ಹೆದ್ದಾರಿಯ ಬಸವನಪುರ ಬಳಿ ಪೊಲೀಸರು ತಪಾಸಣೆ ನಡೆಸುವ ವೇಳೆ ಕಾರಿನಲ್ಲಿದ್ದ ನಾಲ್ಕು ಜನರು ಓಡಿ ಹೋಗಲು ಯತ್ನಿಸಿದ ಘಟನೆ ನಡೆದಿದೆ.
ಈ ವೇಳೆ ಹೆದ್ದಾರಿಯ ಪಕ್ಕದಲ್ಲೇ ಇದ್ದ ರೈಲ್ವೆ ಹಳಿಯ ಮೇಲೆ ಓಡಿ ಹೋಗುವಾಗ ಇದೇ ಸಮಯಕ್ಕೆ ಬಂದ ರೈಲು ಡಿಕ್ಕಿಯಾಗಿ ದಿಲೀಪ್ ಮೃತಪಟ್ಟಿದ್ದಾನೆ. ಉಳಿದ 3 ಮಂದಿಯಲ್ಲಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಉಳಿದ ಓರ್ವ ಪರಾರಿಯಾಗಿದ್ದಾನೆ.
ಈ ಘಟನೆ ಬಗ್ಗೆ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಪಿ. ಸಂತೋಷ್ ಬಾಬು ಪ್ರತಿಕ್ರಿಯಿಸಿ, ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ಸಹಿ ಮಾಡಲು ದಿಲೀಪ್ ಹಾಗೂ ಆತನ ಸಹಚರರು ಎರಡು ಕಾರುಗಳಲ್ಲಿ ಬಂದಿದ್ದರು.
ಜೈಲಿನಲ್ಲಿ ಸಹಿ ಮಾಡಿ ಮೈಸೂರಿಗೆ ಹೋಗುವ ಪ್ಲಾನ್ ಮಾಡಿದ್ದರು. ದಿಲೀಪ್ ಜತೆಗೆ ರೌಡಿ ಶೀಟರ್ಗಳಾದ ಕೆಟಿಎಂ ಭರತ, ಗುಬ್ಬಚ್ಚಿ ಹಾಗೂ ಅಭಿಷೇಕ್ ಇದ್ದರು. 4 ಮಂದಿಯು ಕೂಡ ಮದ್ಯದ ಅಮಲಿನಲ್ಲಿ ಇದ್ದರು.
ಈ ವೇಳೆ ಹೆದ್ದಾರಿಯ ಪಕ್ಕದಲ್ಲೇ ಇರುವ ರೈಲ್ವೆ ಹಳಿಯ ಮೇಲೆ ದಿಲೀಪ್ ನಡೆದು ಹೋಗುತ್ತಿದ್ದ ಈ ವೇಳೆ ರೈಲು ಡಿಕ್ಕಿ ಹೊಡೆದು ದಿಲೀಪ್ ಮೃತಪಟ್ಟಿದ್ದಾನೆ.
ಜತೆಯಲ್ಲಿದ್ದ ಕೆಟಿಎಂ ಭರತ, ಅಭಿಷೇಕ್ ಪೊಲೀಸರ ವಶದಲ್ಲಿದ್ದಾನೆ. ಮತ್ತೋರ್ವ ತಲೆ ಮರೆಸಿಕೊಂಡಿದ್ದಾನೆ. ಪ್ರಕರಣ ವಿಚಾರಣೆ ಹಂತದಲ್ಲಿದೆ ಎಂದರು ಹೇಳಿದರು.