ಕಡಬ: ಮದುವೆಯಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಗಂಡುಮಗುವಿನ ಜನನಕ್ಕೆ ಕಾರಣನಾದ ಯುವಕನ ವಿರುದ್ಧ ವರದಕ್ಷಿಣೆ ಕಿರುಕುಳ, ನಿಂದನೆ ಆರೋಪ ಹೊರಿಸಿ ಯುವತಿ ಠಾಣೆಗೆ ದೂರು ನೀಡಿದ್ದಾಳೆ.
ದೀಕ್ಷಿತ್ ಎಂಬಾತನ ವಿರುದ್ದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿ ಮನೆಗೆ ಸಂಬಂಧಿ ದೀಕ್ಷಿತ್ ಆಗಾಗ ಬರುತ್ತಿದ್ದ ಎನ್ನಲಾಗಿದೆ. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದು ಪ್ರೀತಿಗೆ ತಿರುಗಿ ಮದುವೆಯಾಗುವುದಾಗಿ ನಂಬಿಸಿ ಯುವತಿ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ ಎನ್ನಲಾಗಿದೆ. ಬಳಿಕ ಆತ ಕೆಲಸದ ನಿಮಿತ್ತ ದೂರದೂರಿಗೆ ತೆರಳಿದ್ದ. ಕೆಲ ತಿಂಗಳ ನಂತರ ಯುವತಿ ಗರ್ಭಾವತಿಯಾಗಿದ್ದು ಆಕೆ ಇಬ್ಬರ ಮನೆಯವರಿಗೂ ಈ ವಿಷಯ ತಿಳಿಸಿದ ಹಿನ್ನೆಲೆಯಲ್ಲಿ ವಿವಾಹ ಮಾಡಲು ನಿರ್ಧರಿಸಿದ್ದರು.
ಕುಟ್ರುಪ್ಪಾಡಿ ಆಶಾ ಕಾರ್ಯಕರ್ತೆ ಇವರಿಗೆ ಬರವಣಿಗೆ ಮುಖಾಂತರ ನೀಡಿ ಸ್ವತಃ ಒಪ್ಪಿ ಸಹಿ ಮಾಡಿ ಕಳುಹಿಸಿದ್ದ.ಈತ ಊರಿಗೆ ಬಂದು ಯುವತಿಯ ಮನೆಯವರೊಂದಿಗೆ ಮಾತುಕತೆ ನಡೆಸಿ ಪುತ್ತೂರು ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ವಿವಾಹವಾಗಿದ್ದಾನೆ ಎನ್ನಲಾಗಿದೆ.
ಆತ ಮರಳಿ ಕೆಲಸಕ್ಕೆ ಸೇರಿದ್ದು ಆತ ದೂರವಾಣಿ ಮೂಲಕ ಸಂಪರ್ಕಿಸಿ “ನಿನಗೆ ಹುಟ್ಟಿದ ಮಗು ನನ್ನದಲ್ಲ, ನಾನು ನಿನಗೆ ಡಿಎನ್ಎ ಟೆಸ್ಟ್ ಮಾಡಿಸುತ್ತೇನೆ. ನಿನ್ನ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ನಿಂದಿಸಿ ವರದಕ್ಷಣೆ ಕೊಡಬೇಕು ಎಂದು ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಕಡಬ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ನೀಡಿದ್ದಾಳೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಕಲಂ. 376.498(A) 504.506.R/W 34 IPC And 3.4 D P Act ಯಂತೆ ಪ್ರಕರಣ ದಾಖಲಾಗಿದೆ.