dtvkannada

'; } else { echo "Sorry! You are Blocked from seeing the Ads"; } ?>

ನಿನ್ನೆ (ಶನಿವಾರ) ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ (RCB vs MI) ನಡುವಣ ಪಂದ್ಯ ಹೈವೋಲ್ಟೇಜ್ ಮ್ಯಾಚ್ ಆಗಬಹುದು ಎಂಬ ನಿರೀಕ್ಷೆಯಿತ್ತು. ಹ್ಯಾಟ್ರಿಕ್ ಸೋಲುಂಡು ಭಾರೀ ಮುಖಭಂಗಕ್ಕೆ ಒಳಗಾಗಿದ್ದ ಮುಂಬೈಗೆ ಗೆಲುವು ಅನಿವಾರ್ಯವಾಗಿದ್ದರೆ ಇತ್ತ ಹ್ಯಾಟ್ರಿಕ್ ಗೆಲುವು ಸಾಧಿಸಲು ಆರ್ಸಿಬಿಗೆ ಜಯದ ಅವಶ್ಯಕತೆಯಿತ್ತು. ಆದರೆ, ಪಂದ್ಯ ಸಂಪೂರ್ಣ ಒನ್ ಸೈಡ್ ಆಯಿತು. ಆರ್ಸಿಬಿ ತಂಡ ಬ್ಯಾಟಿಂಗ್ – ಬೌಲಿಂಗ್ನಲ್ಲಿ ಬೊಂಬಾಟ್ ಪ್ರದರ್ಶನ ನೀಡಿತು.

ಅತೀ ಹೆಚ್ಚು ರನ್ ಆಗಬಹುದೆಂದು ಸ್ಟೇಡಿಯಂನಲ್ಲಿ ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು. ಆರ್​ಸಿಬಿ-ಮುಂಬೈ ಅಭಿಮಾನಿಗಳ ಕೂಗು ಜೋರಾಗಿಯೇ ಇತ್ತು. ಇದರ ನಡುವೆ ಪಂದ್ಯ ನಡೆಯುತ್ತಿರುವಾಗ ಅಭಿಮಾನಿಯೊಬ್ಬರು ಮೈದಾನದೊಳಗೆ ಎಂಟ್ರಿ ಕೊಟ್ಟು ಒಂದು ಕ್ಷಣ ಎಲ್ಲರನ್ನೂ ದಂಗಾಗಿಸಿದರು. ಸೆಕ್ಯುರಿಟಿ ಕಣ್ಣು ತಪ್ಪಿಸಿ ಮೈದಾನದೊಳಕ್ಕೆ ಪ್ರವೇಶ ಪಡೆದಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

'; } else { echo "Sorry! You are Blocked from seeing the Ads"; } ?>

ಹೌದು, ಆರ್​​ಸಿಬಿ ತಂಡ ಮುಂಬೈ ನೀಡಿದ್ದ 152 ರನ್​ಗಳ ಟಾರ್ಗೆಟ್ ಬೆನ್ನಟ್ಟುತ್ತಿತ್ತು. ವಿರಾಟ್ ಕೊಹ್ಲಿ ಮತ್ತು ಅನುಜ್ ರಾವತ್ ಕ್ರೀಸ್​ನಲ್ಲಿದ್ದರು. 12ನೇ ಓವರ್ ಮುಕ್ತಾಯವಾದ ಸಂದರ್ಭ ಅಭಿಮಾನಿಯೊಬ್ಬರು ಸೆಕ್ಯುರಿಟಿಗೆ ತಿಳಿಯದಂತೆ ದಿಢೀರ್ ಆಗಿ ಮೈದಾನಕ್ಕೆ ಪ್ರವೇಶ ಪಡೆದರು. ಇವರು ರೋಹಿತ್ ಶರ್ಮಾ ಅಭಿಮಾನಿಯಾಗಿದ್ದು ನೇರವಾಗಿ ಹಿಟ್​ಮ್ಯಾನ್ ಬಳಿ ಬಂದರು. ಒಂದು ಹಗ್ ನೀಡುವಂತೆ ಮನವಿ ಮಾಡಿಕೊಂಡರು. ರೋಹಿತ್ ದೂರದಿಂದಲೇ ಹಗ್ ಮಾಡುವ ರೀತಿ ನಟಿಸಿದರು. ಇಲ್ಲಿಗೆ ನಿಲ್ಲದ ಆ ಅಭಿಮಾನಿ ಕ್ರೀಸ್​​ನಲ್ಲಿದ್ದ ವಿರಾಟ್ ಕೊಹ್ಲಿ ಬಳಿಯೂ ಬಂದಿದ್ದಾರೆ. ಕೊಹ್ಲಿಯಿಂದಲೂ ಹಗ್ ಬೇಕು ಎಂದಿದ್ದಾರೆ. ಆಗ ಕೊಹ್ಲಿ ಕೈಯಿಂದ ಅಪ್ಪಿಕೊಳ್ಳುವ ರೀತಿ ಆ್ಯಕ್ಷನ್ ಮಾಡಿ ಅಭಿಮಾನಿಯ ಆಸೆ ಈಡೇರಿಸಿದ್ದಾರೆ. ಇಲ್ಲಿದೆ ನೋಡಿ ಆ ವಿಡಿಯೋ.

https://twitter.com/NaitikSingh28/status/1512846287083012096?

ಇನ್ನು ಈ ಪಂದ್ಯ ಬಗ್ಗೆ ಮಾತನಾಡುವುದಾದರೆ, ಮಹಾರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಕದನದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು ಸವಾರಿ ನಡೆಸಿದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್-15ರಲ್ಲಿ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ, 6 ವಿಕೆಟ್‌ಗೆ 151 ರನ್‌ಗಳಿಸಿತು. ಸೂರ್ಯಕುಮಾರ್ ಯಾದವ್ (68*ರನ್, 37 ಎಸೆತ, 5 ಬೌಂಡರಿ, 6 ಸಿಕ್ಸರ್) ಏಕಾಂಗಿ ನಿರ್ವಹಣೆ ತೋರಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ನೆರವಾದರು. ಪ್ರತಿಯಾಗಿ ಆರ್‌ಸಿಬಿ, ಅನುಜ್ ರಾವತ್ (66 ರನ್, 47 ಎಸೆತ, 2 ಬೌಂಡರಿ, 6 ಸಿಕ್ಸರ್) ಹಾಗೂ ವಿರಾಟ್ ಕೊಹ್ಲಿ (48 ರನ್, 36 ಎಸೆತ, 5 ಬೌಂಡರಿ) ಕಟ್ಟಿದ ಅದ್ಭುತ ಇನಿಂಗ್ಸ್ ಫಲವಾಗಿ 18.3 ಓವರ್‌ಗಳಲ್ಲಿ 3 ವಿಕೆಟ್‌ಗೆ 152 ರನ್‌ಗಳಿಸಿ ಗೆಲುವು ಸಾಧಿಸಿತು.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!