ತುಮಕೂರು: ರಾಜ್ಯದಲ್ಲಿ ಧರ್ಮ ಧರ್ಮಗಳ ಮಧ್ಯೆ ಕಂದಕ ಉಂಟಾಗುತ್ತಿರುವ ಮಧ್ಯೆ ಶ್ರೀರಾಮನವಮಿ ಸಂಭ್ರಮದಲ್ಲಿ ಹಿಂದೂ ಮುಸ್ಲಿಂಮರು ಭಾವಕ್ಯತೆ ಮೆರೆದ ದೃಶ್ಯಾವಳಿಗಳು ಕಂಡುಬಂದಿದೆ.

ತುಮಕೂರಿನ ಭದ್ರಮ್ಮ ಸರ್ಕಲ್‌ನಲ್ಲಿ ಇಂದು ರಾಮನವಮಿ ಹಿನ್ನೆಲೆ ಯುವ ಕಾಂಗ್ರೆಸ್ ಕಾರ್ಯಕರ್ತರು ಕೇಸರಿ ಶಲ್ಯ ತೊಟ್ಟು ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತ ಸಾರ್ವಜನಿಕರಿಗೆ ಪಾನಕ, ಮಜ್ಜಿಗೆ ವಿತರಿಸುತ್ತಿದ್ದಾರೆ.

ಇದೇ ವೇಳೆ ಮುಸ್ಲಿಂ ಯುವಕರೂ ಸಹ ಅವರೊಂದಿಗೆ ಕೈ ಜೋಡಿಸಿದ್ದಾರೆ. ನಂತರ ಕಾರ್ಯಕ್ರಮದಲ್ಲೂ ಎರಡೂ ಧರ್ಮದವರು ಭಾಗಿಯಾದ್ದಾರೆ.