dtvkannada

ಈ ವರ್ಷದ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರು ತಮ್ಮ ಸಹ ಆಟಗಾರರೊಂದಿಗೆ ಕೋಪಗೊಳ್ಳುವುದನ್ನು ನೋಡಿ ಕ್ರಿಕೆಟ್ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಹಿಂದಿನ ಪಂದ್ಯದಲ್ಲಿ ಅವರು ಡೇವಿಡ್ ಮಿಲ್ಲರ್‌ ಮತ್ತು ನಿನ್ನೆ ನಡೆದ ಎಸ್‌ಆರ್‌ಹೆಚ್ ವಿರುದ್ಧದ ಪಂದ್ಯದಲ್ಲಿ ಆಲ್‌ರೌಂಡರ್ ಮೊಹಮ್ಮದ್ ಶಮಿ ವಿರುದ್ಧ ಕಿಡಿಕಾರಿದ್ದಾರೆ. ರಾಹುಲ್ ತ್ರಿಪಾಠಿ ಅವರ ಹೊಡೆತದಲ್ಲಿ ಶಮಿ ಕ್ಯಾಚ್ ಹಿಡಿಯಲು ಪ್ರಯತ್ನಿಸದ ಕಾರಣ ಹಾರ್ದಿಕ್ ಕೋಪಗೊಂಡರು.

ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಐಪಿಎಲ್ 2022 ರಲ್ಲಿ ಇಲ್ಲಿಯವರೆಗೆ ತಮ್ಮ ತಂಡವನ್ನು ಅದ್ಭುತವಾಗಿ ಮುನ್ನಡೆಸಿದ್ದಾರೆ ಆದರೆ ಅವರ ಕೋಪವು ಪ್ರತೀ ಪಂದ್ಯಾವಳಿಯಲ್ಲಿಯೂ ಪ್ರದರ್ಶನಗೊಂಡಿದೆ. ಕಳೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ರನೌಟ್ ಆದಾಗ ಕ್ರೀಸ್’ನಲ್ಲಿದ್ದ ಸಹಆಟಗಾರ ಡೇವಿಡ್ ಮಿಲ್ಲರ್ ವಿರುದ್ದ ಕೋಪಗೊಂಡಿದ್ದರು. ಈ ಬಾರಿ ಕಷ್ಟಕರವಾದಂತಹ ಕ್ಯಾಚ್‌ಗೆ ಪ್ರಯತ್ನಿಸದೇ ಇದ್ದ ಮೊಹಮ್ಮದ್ ಶಮಿ ಅವರು, ನಾಯಕನ ಕೋಪದ ಭಾರವನ್ನು ಹೊರಬೇಕಾಯಿತು.

ಹಾರ್ದಿಕ್ ಪಾಂಡ್ಯ ಎಸೆದ 12ನೇ ಓವರ್‌ನ ಅಂತಿಮ ಎಸೆತದಲ್ಲಿ ಈ ಘಟನೆ ನಡೆಯಿತು. ಸನ್‌ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟರ್ ರಾಹುಲ್ ತ್ರಿಪಾಠಿ ಇನ್-ಫೀಲ್ಡ್‌ನಲ್ಲಿ ಅಪ್ಪರ್ ಕಟ್ ಆಡಿದರು. ಬಾಲ್ ನೇರ ಮೊಹಮ್ಮದ್ ಶಮಿಗೆ ಅವರ ಬಳಿ ಹೋಯಿತು. ಆದರೆ, ಅದನ್ನು ಕ್ಯಾಚ್ ಹಿಡಿಯಬೇಕಿದ್ದರೆ ಶಮಿ ಮುಂದೆ ಸಾಗಬೇಕಿತ್ತು. ಬದಲಾಗಿ, ಶಮಿ ಬೌಂಡರಿಯನ್ನು ರಕ್ಷಿಸುವ ಸುರಕ್ಷಿತ ಮಾರ್ಗವನ್ನು ತೆಗೆದುಕೊಂಡರು. ಇದು ಹಾರ್ದಿಕ್ ಪಾಂಡ್ಯಗೆ ಕೋಪವನ್ನುಂಟುಮಾಡಿತು. ಅವರು ಕ್ಯಾಚ್‌ಗೆ ಪ್ರಯತ್ನಿಸದಿದ್ದಕ್ಕಾಗಿ ತಮ್ಮ ಸಹ ಆಟಗಾರನ ಮೇಲೆ ರೇಗಿದರು.

ಇದೀಗ ನೆಟ್ಚಿಗರು ಹಾರ್ದಿಕ್ ಪಾಂಡ್ಯ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ. ಮೈದಾನದಲ್ಲಿ ಸಹಆಟಗಾರರು ಮತ್ತು ಹಿರಿಯ ಆಟಗಾರರಿಗೆ ಗೌರವ ಕೊಡಿ, ನೀವು ನಾಯಕ ಸ್ಥಾನಕ್ಕೆ ಅನರ್ಹರು ಎಂದೆಲ್ಲಾ ಟೀಕಿಸಿದ್ದಾರೆ.

https://twitter.com/rishobpuant/status/1513565695950262277?

ಥರ್ಡ್ ಮ್ಯಾನ್ ಫೀಲ್ಡಿಂಗ್ನಲ್ಲಿ ಮೊಹಮ್ಮದ್ ಶಮಿ ಇದ್ದರು. ಓಡಿ ಬಂದರೂ ಶಮಿಗೆ ಆ ಕ್ಯಾಚ್ ಅನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಹೀಗಾಗಿ ಸ್ವಲ್ಪ ಹಿಂದೆ ಹೋಗಿ ಚೆಂಡು ನೆಲಕ್ಕೆ ತಾಗಿದ ಮೇಲೆ ಹಿಡಿದರು. ಇದರಿಂದ ಕೋಪಗೊಂಡ ಹಾರ್ದಿಕ್ ಪಾಂಡ್ಯ ಅವರು ಫೀಲ್ಡಿಂಗ್ ವಿಚಾರವಾಗಿ ಶಮಿ ಮೇಲೆ ಕಿರುಚಾಡಿದರು. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ ಒಬ್ಬ ಹಿರಿಯ ಆಟಗಾರನ ಜೊತೆ ಹೇಗೆ ಮಾತನಾಡಬೇಕು ಎಂಬುದು ಗೊತ್ತಿಲ್ಲವೇ ಎಂದು ಕಿಡಿ ಕಾಡುತ್ತಿದ್ದಾರೆ. ಶಮಿ ಟೀಮ್ ಇಂಡಿಯಾಕ್ಕೆ ಎಷ್ಟು ಕೊಡುಗೆ ನೀಡಿದ್ದಾರೆಂದು ಎಲ್ಲರಿಗೂ ತಿಳಿದಿದೆ. ಇಂತಹ ಶ್ರೇಷ್ಠ ಪ್ಲೇಯರ್ಗೆ ಹಾರ್ದಿಕ್ ಈರೀತಿ ರಿಯಾಕ್ಟ್ ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!